", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/463655-1757501129-manjunath---2025-09-10T161502.095.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ. ಡಿ.) ಇದು...Read more" } ", "keywords": "mla kc virendra pappi, 100 crore property seized, ed raid, enforcement directorate, asset seizure, corruption case, karnataka politics, money laundering, kannada news, political scandal", "url": "https://dashboard.publicnext.com/node" } ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ ಸೇರಿದ 100 ಕೋಟಿಗೂ ಅಧಿಕ ಆಸ್ತಿ 'ಇಡಿಯಿಂದ' ಜಪ್ತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ ಸೇರಿದ 100 ಕೋಟಿಗೂ ಅಧಿಕ ಆಸ್ತಿ 'ಇಡಿಯಿಂದ' ಜಪ್ತಿ

ಬೆಂಗಳೂರು: ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ. ಡಿ.) ಇದುವರೆಗೆ ಚಳ್ಳಕೆರೆ ಶಾಸಕ ವೀರೇಂದ್ರ ಅಲಿಯಾಸ್ ಪಪ್ಪಿಗೆ ಸೇರಿದ ಕೆ. ಜಿ. ಗಟ್ಟಲೇ ಚಿನ್ನ, ಬೆಳ್ಳಿ, ಐಷಾರಾಮಿ ಕಾರುಗಳು ಸೇರಿ 100 ಕೋಟಿಗೂ ಅಧಿಕ ಆಸ್ತಿಗಳನ್ನು ಜಪ್ತಿ ಮಾಡಿದೆ.

ಇಡಿ ಅಧಿಕಾರಿಗಳು ಸೆ. 6ರಂದು ಚಳ್ಳಕೆರೆಯಲ್ಲಿ ಕೆ. ಸಿ. ವೀರೇಂದ್ರ ಹಾಗೂ ಸಂಬಂಧಿತರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿ ನಡೆಸಿತ್ತು. ಈ ವೇಳೆ 24 ಕೋಟಿ ರೂ. ಮೌಲ್ಯದ 24 ಕ್ಯಾರೆಟ್ 21. 43 ಕೆ. ಜಿ. ಚಿನ್ನದ ಗಟ್ಟಿ, 10.985 ಕೆ. ಜಿ. ತೂಕದ ಚಿನ್ನ ಲೇಪಿತ 11 ಬೆಳ್ಳಿ ಗಟ್ಟಿಗಳು ಹಾಗೂ 1 ಕೆ. ಜಿ. ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಜತೆಗೆ ಇದುವರೆಗಿನ ದಾಳಿಯಲ್ಲಿ ಆರೋಪಿ ಮತ್ತು ಅವರ ಸಂಬಂಧಿಕರಿಗೆ ಸೇರಿದಂತೆ ಒಟ್ಟು ಸುಮಾರು 100 ಕೋಟಿ ರೂ. ಗೂ ಅಧಿಕ ಚಿನ್ನಾಭರಣ, ನಗದು ಹಾಗೂ ಆಸ್ತಿಗೆ ಸೇರಿದ್ದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಇದಕ್ಕೂ ಮುನ್ನ ಇ. ಡಿ. ಅಧಿಕಾರಿಗಳು ಆರೋಪಿ ಕೆ. ಸಿ. ವೀರೇಂದ್ರನನ್ನು 15 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕಡೆಯ ನಾಲ್ಕು ದಿನ ಹೆಚ್ಚಿನ ವಿಚಾರಣೆ ವೇಳೆ ಆರೋಪಿ ಕೆ. ಸಿ. ವೀರೇಂದ್ರ ಕಿಂಗ್ 567, ರಾಜಾ 567, ಪ್ಲೇ 567, ಪ್ಲೇವಿನ್ 567 ಇತ್ಯಾದಿ ಹೆಸರಿನಲ್ಲಿ ಹಲವು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಈ ಅಕ್ರಮ ಆನ್‌ಲೈನ್/ಆಫ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳ ಮೂಲಕ ಗಳಿಸಿದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಹಲವು ಗೇಟ್ ವೇಗಳನ್ನು ಬಳಸಿರುವುದು ಇಡಿ ತನಿಖೆಯಲ್ಲಿ ಬಯಲಾಗಿದೆ.

ಆರೋಪಿ ಕೆ. ಸಿ. ವೀರೇಂದ್ರ, ಅವರ ಕುಟುಂಬ ಸದಸ್ಯರು ಹಾಗೂ ಸಹಚರರು ವಿದೇಶಗಳಿಗೆ ಪ್ರಯಾಣಿಸಲು ಟಿಕೆಟ್ ಖರೀದಿಸಲು ಕೋಟ್ಯಂತರ ರೂ. ವಿನಿಯೋಗಿಸಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳಿಂದ ಬರುವ ಆದಾಯವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡು ಬಳಿಕ ವಿಮಾನ ಟಿಕೆಟ್ ಬುಕ್ ಮಾಡಲು ಬಳಸಿಕೊಂಡಿರುವುದು ಇ. ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಬಳಸಲಾದ ಹಣವನ್ನು ಅಕ್ರಮ ಆನ್‌ಲೈನ್ ಚಟುವಟಿಕೆಗಳಿಗೆ ತಿರುಗಿಸಲಾಗಿದೆ. ಈ ಹಣದ ಮೂಲವನ್ನು ಮರೆಮಾಚಲು ಮಧ್ಯವರ್ತಿಗಳ ಖಾತೆಗಳನ್ನು ಬಳಸಿಕೊಂಡಿರುವುದು ಸಾಕ್ಷಿಗಳಿಂದ ಬಯಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆ. ಸಿ. ವೀರೇಂದ್ರ ಮತ್ತು ಅವರ ಕುಟುಂಬ ಬಳಸುತ್ತಿದ್ದ ಐಷಾರಾಮಿ ಕಾರುಗಳನ್ನು ಬೇರೆ ವ್ಯಕ್ತಿಗಳು ಹಾಗೂ ಕಂಪನಿಗಳ ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆ. ಈ ಪೈಕಿ ಮರ್ಸಿಡೀಸ್ ಬೆಂಜ್ (ಕೆಎ 55 ಪಿ0003) ಕಾರನ್ನು ಅನಿಲ್ ಗೌಡಗೆ ಸೇರಿದ ಎಬಿಎಚ್ ಇನ್ಫ್ರಾಸ್ಟ್ರಚರ್ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಕೆಎ 45 ಎನ್ 0003 ನೋಂದಣಿ ಸಂಖ್ಯೆಯ ರೇಂಜ್ ರೋವರ್ ಕಾರು ಖರೀದಿಗೆ ಗುಲ್ಶನ್ ಖಟ್ಟರ್ ಫೋನಿಪೈಸಾ ಎಂಬವರು ಹಣಕಾಸು ನೆರವು ನೀಡಿರುವುದು ಇ. ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ. ಡಿ. ಪ್ರಕಟಣೆಯಲ್ಲಿ ತಿಳಿಸಿದೆ.

Edited By :
PublicNext

PublicNext

10/09/2025 04:15 pm

Cinque Terre

24.74 K

Cinque Terre

5

ಸಂಬಂಧಿತ ಸುದ್ದಿ