", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1757499235-_(1280-x-720-px)-(33).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಮದ್ದೂರು ಗಲಾಟೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ನಾನೂ ಹಿಂದೂ, ಹಿಂದೂಪರ ಭಾವನೆಗಳ ಪರ ...Read more" } ", "keywords": ""Hindu sentiments, Congress MLA, Narendra Swami, Hindu support, Karnataka politics, Dharmasthala Sangha controversy" ", "url": "https://dashboard.publicnext.com/node" }
ಬೆಂಗಳೂರು : ಮದ್ದೂರು ಗಲಾಟೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ನಾನೂ ಹಿಂದೂ, ಹಿಂದೂಪರ ಭಾವನೆಗಳ ಪರ ಇದ್ದೇನೆ ಎಂದು ಹೇಳಿದ್ದಾರೆ.
ಮದ್ದೂರು ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು, ನಾನೂ ಕೂಡ ಮದ್ದೂರಿಗೆ ಹೋಗ್ತೇನೆ. ಅಲ್ಲಿ ನಡೆದಿರವುದು ವಿಷಾದಕರವಾದ ವಿಷಯ. ಕ್ಷುಲ್ಲಕ ವಿಚಾರಗಳಿಗೆ ಈ ರೀತಿ ಸಾರ್ವಜನಿಕ ಬದುಕು ಹಾಳು ಮಾಡುವುದು ಶಾಂತಿ ಭಂಗ ಮಾಡುವುದು ತಪ್ಪು. ಎಲ್ಲರೂ ಆತ್ಮೀಯತೆ ಸಹೋದರತೆಯಿಂದ ಬದುಕಬೇಕು ಎಂದು ಮನವಿ ಮಾಡಿದರು.
ಇದು ಆಕಸ್ಮಿಕ ಘಟನೆ, ಯಾರಿಗೂ ಹೀಗಾಗತ್ತದೆ ಎನ್ನುವ ಮಾಹಿತಿ ಇರಲಿಲ್ಲ. ನೀವು ಬಿಜೆಪಿ ಪರವಾಗಿಯಾದರೂ ಕೇಳಿ ಕಾಂಗ್ರೆಸ್ ಪರವಾಗಿಯಾದರೂ ಕೇಳಿ ನಾನು ಉತ್ತರಿಸುವುದಿಲ್ಲ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ, ಅಸೆಂಬ್ಲಿಯಲ್ಲಿ ಅವರಿಗೆ ಕೆಲಸ ಇತ್ತಾ? ಇದನ್ನು ಕೆದಕಿ ಶಾಂತಿ ಭಂಗ ಮಾಡಬೇಕು ಅಂತ ಬಿಜೆಪಿಯವರು ಮಾಡ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಿಗೆ ಬಂದಿದೆ ಎಂದು ಕಿಡಿಕಾರಿದರು. ಇವತ್ತು ಬಸರಾಳದಲ್ಲಿ ಬಂತು, ಮದ್ದೂರು ಬಂತು, ನಾಗಮಂಗಲ ಬಂತು, ನಾಳೆ ಇನ್ನೆಲ್ಲೋ. ಅವರಿಗೆ ಹತಾಶ ಮನೋಭಾವ ಇದೆ.
ಸಣ್ಣ ಪುಟ್ಟ ವಿಚಾರಗಳು ಅಲ್ಲಿಂದಲ್ಲೇ ನಡೆಯುತ್ತಿರುತ್ತದೆ. ಆದರೆ ನಾನೂ ಹಿಂದೂ, ಹಿಂದೂಪರ ಭಾವನೆಗಳ ಪರವಾಗಿ ನಾನೂ ಇದ್ದೇನೆ. ಆದರೆ ರಾಜಕೀಯವಾಗಿ ಎಲ್ಲ ವಿಚಾರಗಳನ್ನೂ ಎತ್ತಿಕೊಳ್ಳುವುದು ಬೇಡ ಎಂದರು. ಭಾವನಾತ್ಮಕವಾಗಿ ಜನರನ್ನು ಪ್ರಚೋದನೆ ಮಾಡುವುದು ಬೇಡ. ಸಣ್ಣ ಪುಟ್ಟ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆಯಬಹುದು, ನಡೆದಿರಬಹುದು, ನಡೆಯದೆಯೂ ಇರಬಹುದು. ಆದರೆ ಎರಡನ್ನೂ ನಾನು ಉಲ್ಲೇಖ ಮಾಡಿ ಮಾತಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
10/09/2025 03:49 pm