ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳ ಬಳಿಕ ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾಚಾರ : 200 ಮಂದಿ ಅರೆಸ್ಟ್‌

ಪ್ಯಾರಿಸ್: ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಇನ್ನೂ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ಫ್ರೆಂಚ್ ರಾಜಧಾನಿ ಪ್ಯಾರಿಸ್‌ ಇದೀಗ ಕೂಡ ಹೊತ್ತಿ ಉರಿಯುತ್ತಿದೆ. ಅನೇಕ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಿಂಸಾಚಾರವನ್ನು ಸೃಷ್ಟಿಸಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಬಜೆಟ್‌ನಲ್ಲಿ 44 ಬಿಲಿಯನ್ ಯುರೋ (ಸುಮಾರು 4 ಲಕ್ಷ ಕೋಟಿ ರೂ.) ಉಳಿಸುವ ಯೋಜನೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ರಕ್ಷಣಾ ಸಚಿವ ಲೆಕೋರ್ನ್ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ. ಈ ನಿರ್ಧಾರ ವಿರೋಧಿಸಿ ಪ್ಯಾರಿಸ್‌ನಲ್ಲಿ ದಂಗೆಗಳು ಪ್ರಾರಂಭಗೊಂಡಿವೆ.

ಪೊಲೀಸರು ದಂಗೆಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಬಳಸಿಕೊಂಡು 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ರೆನ್ನೆಸ್‌ನಲ್ಲಿ ಬಸ್‌ಗೆ ಬೆಂಕಿ ಹಚ್ಚಿದ ಪರಿಣಾಮ ವಿದ್ಯುತ್ ಕಡಿತಗೊಂಡು ರೈಲು ಸಂಚಾರ ಸ್ಥಗಿತಗೊಂಡಿದೆ.

Edited By :
PublicNext

PublicNext

10/09/2025 05:43 pm

Cinque Terre

23.63 K

Cinque Terre

1

ಸಂಬಂಧಿತ ಸುದ್ದಿ