ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಆಫ್ರಿಕಾ ಮೂಲದ ಕ್ಯಾಪುಚಿನ್ ಕೋತಿಗಳು ಇದೀಗ ಪಾರ್ಕ್‌ನ ಹೊಸ ಆಕರ್ಷಣೆಯಾಗಿವೆ. ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿ ದಕ್ಷಿಣ ಆಫ್ರಿಕಾದಿಂದ 8 ಕ್ಯಾಪುಚಿನ್ ಕೋತಿಗಳು ಬನ್ನೇರುಘಟ್ಟ ಪಾರ್ಕ್‌ಗೆ ಆಗಮಿಸಿವೆ. ದಕ್ಷಿಣ ಆಫ್ರಿಕಾದ ಇಂಡೋನಾ ಪ್ರೈಮೆಟ್ ಮತ್ತು ಪ್ಯಾರೆಟ್ ಪಾರ್ಕ್‌ನಿಂದ ಈ ವಿನಿಮಯ ನಡೆದಿದ್ದು, ಭಾನುವಾರ ರಾತ್ರಿ ಉದ್ಯಾನವನಕ್ಕೆ ಈ ಕೋತಿಗಳು ತಲುಪಿವೆ. ಆಗಮಿಸಿರುವ 4 ಜೋಡಿ ಕೋತಿಗಳಲ್ಲಿ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕೋತಿಗಳಿವೆ.
ಸದ್ಯಕ್ಕೆ ಈ ಕೋತಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ
PublicNext
17/12/2025 04:29 pm
LOADING...