ಬೆಳಗಾವಿ: ನಿಮ್ಮ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿಕೊಂಡಿದೆ.. ಅದರಿಂದಾಗಿಯೇ ಕರಾವಳಿ ಭಾಗಕ್ಕೆ ಬೆಂಕಿ ಬಿದ್ದಿದೆ!
ಕರಾವಳಿಗೆ ಬೆಂಕಿ ಹಾಕಿದವರು ಯಾರು? ನೀವು ಹೀಗೆ ಹೆದರಿಸಿದರೆ ಹೆದರುವವರು ನಾವಲ್ಲ..! ಜಾಸ್ತಿ ಮಾತಾಡಬೇಡ..ನೀನ್ಯಾವನೋ ಮಾತಾಡೋಕೆ?
ಇದು ಇಂದು ಮಧ್ಯಾಹ್ನ ಭೋಜನ ವಿರಾಮಕ್ಕೂ ಮುನ್ನ ವಿಧಾನಸಭೆ ಕಲಾಪದಲ್ಲಿ ಸಚಿವರು, ಶಾಸಕರುಗಳ ಬಾಯಿಂದ ಹೊರ ಬಂದಂಥ ʼನುಡಿʼಗಳ ಝಲಕ್!
ದ್ವೇಷ ಭಾಷಣ ತಿದ್ದುಪಡಿ ಮಸೂದೆ ಮೇಲೆ ನಡೆದ ಚರ್ಚೆ ಹಳಿ ತಪ್ಪಿದಂತಾಗಿ ಕೊನೆಗೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಸಚಿವ ಭೈರತಿ ಸುರೇಶ್ ಅವರು ಬಿಜೆಪಿ ಸದಸ್ಯರತ್ತ ಬೆರಳು ಮಾಡಿ ರೋಷಾವೇಶದಿಂದ ಏಕವಚನದಲ್ಲಿ ಮಾತನಾಡಿದ್ದು ಕಂಡು ಬಂತು. ಇಷ್ಟೆಲ್ಲ ಮಾತಿನ ಚಕಮಕಿ ನಡೆಯುತ್ತಿದ್ದರೂ ಸ್ಪೀಕರ್ ಯು.ಟಿ.ಖಾದರ್ ಕೂಡಲೇ ಗಲಾಟೆಯನ್ನು ನಿಯಂತ್ರಿಸುವಲ್ಲಿ ಅದೇಕೋ ಅಸಹಾಯಕರಾದಂತೆ ತೋರಿತು!
PublicNext
18/12/2025 10:06 pm
LOADING...