ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡ ಅಭಿಷೇಕ್-ಐಶ್ವರ್ಯಾ.! - ವಿಚ್ಛೇದನ ವದಂತಿಗಳಿಗೆ ತೆರೆ

ಮುಂಬೈ: ಮುಂಬೈನಲ್ಲಿ ಗುರುವಾರ ಸಂಜೆ ನಡೆದ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ನಟ ಅಭಿಷೇಕ್ ಬಚ್ಚನ್ ಮತ್ತು ಪತ್ನಿ, ನಟಿ ಐಶ್ವರ್ಯಾ ರೈ ಬಚ್ಚನ್ ಜಂಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಮಾರಂಭದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ವೈರಲ್ ಆಗಿವೆ.

ಅಭಿಷೇಕ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವಿಚ್ಛೇದನದ ವದಂತಿಗಳನ್ನು "ಅಸಂಬದ್ಧ, ದುರುದ್ದೇಶಪೂರಿತ ಮತ್ತು ಸಂಪೂರ್ಣವಾಗಿ ಸುಳ್ಳು" ಎಂದು ತಳ್ಳಿಹಾಕಿದ ಕೆಲವೇ ದಿನಗಳ ನಂತರ ಈ ಜೋಡಿ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದೆ. ಈ ಸಾರ್ವಜನಿಕ ಪ್ರದರ್ಶನವು ದಂಪತಿಯ ವಿಚ್ಛೇದನದ ವದಂತಿಗಳಿಗೆ ತೆರೆ ಎಳೆದಂತಾಗಿದೆ.

Edited By : Vijay Kumar
PublicNext

PublicNext

19/12/2025 12:36 pm

Cinque Terre

34.6 K

Cinque Terre

1