ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಶ್ಮಿಕಾ ಬಳಿಕ ಶ್ರೀಲೀಲಾ ಏನಿದು ಫೋಟೋ ಮಾರ್ಪಿಂಗ್ ವಿವಾದ..!

ಬೆಂಗಳೂರು : ತಂತ್ರಜ್ಞಾನ ದಿನೇದಿನೇ ಹೊಸ ಹಂತಕ್ಕೆ ತಲುಪುತ್ತಿದ್ದು, ಕೃತಕ ಬುದ್ಧಿಮತ್ತೆ ಎಂದೇ ಕರೆಯಲಾಗುವ AI ಇತ್ತೀಚಿನ ದಿನಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಾನವ ಜೀವನವನ್ನು ಸುಲಭಗೊಳಿಸುವ ಉದ್ದೇಶದಿಂದ ರೂಪುಗೊಂಡ ಈ ತಂತ್ರಜ್ಞಾನ, ದುರುಪಯೋಗವಾದಾಗ ಸಮಾಜಕ್ಕೆ ಗಂಭೀರ ಸಮಸ್ಯೆಗಳನ್ನುಂಟು ಮಾಡುತ್ತಿದೆ.

ವಿಶೇಷವಾಗಿ ನಟ–ನಟಿಯರ ಫೋಟೋಗಳು ಹಾಗೂ ವೀಡಿಯೋಗಳನ್ನು AI ಬಳಸಿ ಅಸಭ್ಯವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ವಿಚಾರವಾಗಿ ಮೊದಲು ನಟಿ ರಶ್ಮಿಕಾ ಮಂದಣ್ಣ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು. ಇದೀಗ ನಟಿ ಶ್ರೀಲೀಲಾ ಕೂಡ ಇದೇ ರೀತಿಯ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ತಮ್ಮ ಫೋಟೋಗಳನ್ನು ಮಾರ್ಪ್ ಮಾಡಿ ಹರಿಬಿಡುತ್ತಿರುವುದನ್ನು ಖಂಡಿಸಿ ಅವರು ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ. “ಈ ವಿಷಯ ನನ್ನ ಗಮನಕ್ಕೆ ಬರದೇ ಇತ್ತು. ಇದನ್ನು ನನಗೆ ತಿಳಿಸಿದವರಿಗೆ ಧನ್ಯವಾದ. ತಂತ್ರಜ್ಞಾನವನ್ನು ಸೃಜನಶೀಲವಾಗಿ ಬಳಸುವುದಕ್ಕೂ ದುರುಪಯೋಗ ಮಾಡುವುದಕ್ಕೂ ಸ್ಪಷ್ಟ ವ್ಯತ್ಯಾಸವಿದೆ” ಎಂದು ಶ್ರೀಲೀಲಾ ಹೇಳಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಯಾರಿಗೋ ಮಗಳು, ಸಹೋದರಿ ಅಥವಾ ಸ್ನೇಹಿತೆಯಾಗಿರುತ್ತಾಳೆ.

ಗೌರವಯುತ ಮತ್ತು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಹಕ್ಕು ನಮಗೂ ಇದೆ ಎಂದು ಅವರು ಹೇಳಿದ್ದಾರೆ. ಇಂತಹ ಘಟನೆಗಳು ನನಗೆ ಮಾತ್ರವಲ್ಲ, ನನ್ನ ಸಹ ಕಲಾವಿದರಿಗೂ ನೋವುಂಟು ಮಾಡುತ್ತಿವೆ. ಅವರ ಪರವಾಗಿ ನಾನು ನಿಲ್ಲುತ್ತೇನೆ. ದಯವಿಟ್ಟು ನಮ್ಮೊಂದಿಗೆ ನಿಲ್ಲಿ ಎಂದು ಅವರು ಸಮಾಜವನ್ನು ಮನವಿ ಮಾಡಿದ್ದಾರೆ.

Edited By :
PublicNext

PublicNext

19/12/2025 07:07 pm

Cinque Terre

72.06 K

Cinque Terre

1