ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್‌ಬಾಸ್ ಮನೆಯಲ್ಲಿ ಮಕ್ಕಳಾಟ: ಸುದೀಪ್‌ರಿಂದ ಕಠಿಣ ಪಾಠ!

ಬಿಗ್‌ಬಾಸ್ ಮನೆಯೆಂದರೆ ಕೆಲವೊಮ್ಮೆ ಸ್ಪರ್ಧಿಗಳು ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸುವುದು ಸಾಮಾನ್ಯ. ತೀರ ಸಿಲ್ಲಿ ವಿಷಯಗಳಿಗೆ ಸಿಲ್ಲಿಯಾಗಿ ಜಗಳ ಮಾಡುವುದು, ಉದ್ದೇಶಪೂರ್ವಕವಾಗಿ ಹಠ ಹಿಡಿಯುವುದು, ಇದ್ದಕ್ಕಿದ್ದಂತೆ ಕಣ್ಣೀರು ಸುರಿಸುವುದು ಇತ್ಯಾದಿ ದೃಶ್ಯಗಳು ಪದೇ ಪದೇ ಕಂಡುಬರುತ್ತವೆ.

ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ಆಡಿಸಲಾಗಿದ್ದ ಒಂದು ಟಾಸ್ಕ್‌ಗೆ ರಾಶಿಕಾ ಉಸ್ತುವಾರಿ ಆಗಿದ್ದರು. ಆದರೆ, ಆ ಟಾಸ್ಕ್ ಸಂಪೂರ್ಣವಾಗಿ ಗೊಂದಲಗಳ ಗೂಡಾಗಿ ಪರಿಣಮಿಸಿತ್ತು. ಇದೀಗ ಈ ವಿಷಯವನ್ನೇ ಪ್ರಮುಖವಾಗಿ ಹಿಡಿದುಕೊಂಡು, ಕಿಚ್ಚ ಸುದೀಪ್ ಅವರು ಇಡೀ ಬಿಗ್‌ಬಾಸ್ ಮನೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸ್ಪರ್ಧಿಗಳ ಬೇಜವಾಬ್ದಾರಿ ವರ್ತನೆ ಮತ್ತು ಟಾಸ್ಕ್ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಸುದೀಪ್ ಕಠಿಣವಾಗಿ ಪಾಠ ಹೇಳಿದ್ದಾರೆ.

Edited By : Abhishek Kamoji
PublicNext

PublicNext

20/12/2025 04:09 pm

Cinque Terre

10.59 K

Cinque Terre

0