ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

U19 ಏಷ್ಯಾ ಕಪ್: ಶ್ರೀಲಂಕಾ ವಿರುದ್ಧ 8 ವಿಕೆಟ್‌ ಗೆಲುವು, ಫೈನಲ್‌ಗೆ ಭಾರತ

ದುಬೈ: 19 ವರ್ಷದೊಳಗಿನ ಏಷ್ಯಾ ಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ.ಏಕದಿನ ಮಾದರಿಯಲ್ಲಿ ನಡೆಯಬೇಕಿದ್ದ ಈ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ, ಅದನ್ನು 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಟಾಸ್‌ ಗೆದ್ದ ಭಾರತ ತಂಡವು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡವು ಭಾರತದ ಬೌಲರ್‌ಗಳ ಬಿಗಿ ದಾಳಿಯ ಎದುರು ರನ್‌ಗಳಿಸಲು ತೀವ್ರವಾಗಿ ಪರದಾಡಿತು. ನಿಗದಿತ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ ಕೇವಲ 138 ರನ್‌ ಗಳಿಸಲಷ್ಟೇ ಶಕ್ತವಾಯಿತು.

139 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತವು ಆರಂಭಿಕ ಆಟಗಾರ ವೈಭವ್‌ ಸೂರ್ಯವಂಶಿ (7 ರನ್‌, 8 ಎಸೆತ) ಹಾಗೂ ನಾಯಕ ಆಯುಷ್ ಮ್ಹಾತ್ರೆ (9 ರನ್‌, 6 ಎಸೆತ) ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡು ಸಣ್ಣ ಆತಂಕಕ್ಕೆ ಒಳಗಾಗಿತ್ತು. ಆದರೆ, ಆರನ್ ಜಾರ್ಜ್ (49 ಎಸೆತಗಳಲ್ಲಿ 58 ರನ್‌) ಹಾಗೂ ವಿಹಾನ್ ಮಲ್ಹೋತ್ರಾ (45 ಎಸೆತಗಳಲ್ಲಿ 61 ರನ್‌) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು ಕೇವಲ 18 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ, ಸುಲಭ ಜಯ ಸಾಧಿಸಿತು.

ಡಿ.21ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

Edited By : Nirmala Aralikatti
PublicNext

PublicNext

19/12/2025 08:57 pm

Cinque Terre

64.9 K

Cinque Terre

1