ಟೀಂ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ, ಭಾರತದ ಪರ ಟಿ20 ಮಾದರಿಯಲ್ಲಿ ಅತ್ಯಧಿಕ ರೇಟಿಂಗ್ ಗಳಿಸಿದ ಬೌಲರ್ ಆಗಿ ಹೊಸ ಇತಿಹಾಸ ಬರೆದಿದ್ದಾರೆ.
ವರುಣ್ ಚಕ್ರವರ್ತಿ ಅವರು ಪ್ರಸ್ತುತ 818 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಮೂಲಕ, ಅವರು ಈ ಹಿಂದೆ ಜಸ್ಪ್ರೀತ್ ಬುಮ್ರಾ ಹೊಂದಿದ್ದ 783 ರೇಟಿಂಗ್ ಪಾಯಿಂಟ್‌ಗಳ ದಾಖಲೆಯನ್ನು ಮೀರಿಸಿದ್ದಾರೆ. ಆದಾಗ್ಯೂ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೌಲರ್ ಒಬ್ಬರು ಗಳಿಸಿದ ಅತ್ಯಧಿಕ ರೇಟಿಂಗ್ ಎಂಬ ದಾಖಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಉಮರ್ ಗುಲ್ (865 ರೇಟಿಂಗ್ ಪಾಯಿಂಟ್‌ಗಳು) ಅವರ ಹೆಸರಿನಲ್ಲಿದೆ.
PublicNext
18/12/2025 07:38 am
LOADING...