ಚೆನ್ನೈ: ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಐಪಿಎಲ್ 2026ರ ಮೆಗಾ ಹರಾಜಿನ ನಂತರ ಟಾಪ್ ನಾಲ್ಕು ತಂಡಗಳು ಹೇಗಿರಬಹುದು ಎಂದು ತಮ್ಮ ಭವಿಷ್ಯ ನುಡಿದಿದ್ದಾರೆ.
ಮುಂಬೈ ಇಂಡಿಯನ್ಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನಡೆದ ಸಂವಾದದ ವೇಳೆ ಅಶ್ವಿನ್ ಈ ಆಯ್ಕೆಗಳನ್ನು ಪ್ರಕಟಿಸಿದ್ದಾರೆ. ಅಶ್ವಿನ್ ತಮ್ಮ ಮೊದಲ ಆಯ್ಕೆಯಾಗಿ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಹೆಸರಿಸಿದ್ದಾರೆ. ನಂತರ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳನ್ನು ತಮ್ಮ ಟಾಪ್ ನಾಲ್ಕು ತಂಡಗಳಲ್ಲಿ ಸೇರಿಸಿದ್ದಾರೆ. ಆದರೆ, ಅಚ್ಚರಿ ಎಂದರೆ, ಅಶ್ವಿನ್ ತಮ್ಮ ಮಾಜಿ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಟಾಪ್ ನಾಲ್ಕರ ಪಟ್ಟಿಯಲ್ಲಿ ಆಯ್ಕೆ ಮಾಡಿಲ್ಲ.
PublicNext
19/12/2025 07:23 am
LOADING...