ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SRH ಬೌಲಿಂಗ್ ಬಗ್ಗೆ ಶ್ರೀಕಾಂತ್ ಕೆಂಡಾಮಂಡಲ: '20 ಓವರ್ ಬೌಲ್ ಮಾಡೋದ್ಯಾರು?'

ಭಾರತದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಅವರು ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡದ ಐಪಿಎಲ್ 2026ರ ಹರಾಜು ತಂತ್ರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಬೌಲಿಂಗ್ ವಿಭಾಗವನ್ನು ಬಲಪಡಿಸುವಲ್ಲಿ ತಂಡ ವಿಫಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"SRH ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದರೂ, SRH ಪರವಾಗಿ 20 ಓವರ್‌ಗಳನ್ನು ಯಾರು ಬೌಲ್ ಮಾಡುತ್ತಾರೆ?" ಎಂದು ಶ್ರೀಕಾಂತ್ ಖಾರವಾಗಿ ಪ್ರಶ್ನಿಸಿದ್ದಾರೆ. ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 13 ಕೋಟಿಗೆ ಖರೀದಿಸಿದ್ದನ್ನೂ ಅವರು ಟೀಕಿಸಿದ್ದಾರೆ. "ಅವರು ಮೊಹಮ್ಮದ್ ಶಮಿಯನ್ನು ಕೈಬಿಟ್ಟರು. ಶಮಿಗೆ ಬದಲಿ ಯಾರು?" ಎಂದು ಶ್ರೀಕಾಂತ್ ಮತ್ತೊಂದು ಪ್ರಶ್ನೆ ಎಸೆದಿದ್ದಾರೆ.

Edited By : Vijay Kumar
PublicNext

PublicNext

18/12/2025 09:13 am

Cinque Terre

14.99 K

Cinque Terre

0