ಬೆಂಗಳೂರು : ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಇದೀಗ ಕಸದ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ಸೀಕ್ರೆಟ್ ರೂಮ್‌ನಿಂದ ಹೊರಬಂದ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್, ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್‌ನ ಭಾಗವಾಗಿ ಇಡೀ ಮನೆಯನ್ನು ಕಸದಿಂದ ತುಂಬಿ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಸವೋ ಕಸ! ಹೊಸ ಚಾಲೆಂಜ್ ಸ್ಪರ್ಧಿಗಳ ತಲೆ ಸುತ್ತಿಸುವುದು ಖಚಿತ. ಮನೆ ಗಲೀಜಾಗಿದೆ, ಎಲ್ಲಿ ನೋಡಿದರೂ ಕಸವೂ ಕಸ. ಸುಂದರವಾಗಿದ್ದ ಬಿಗ್ ಬಾಸ್ ಮನೆ ಇದೀಗ ಸಂಪೂರ್ಣವಾಗಿ ಕಸಮಯವಾಗಿದೆ.
ಆದರೆ, ಇದನ್ನು ಸ್ವಚ್ಛಗೊಳಿಸುವುದೇ ಸ್ಪರ್ಧಿಗಳಿಗೆ ದೊಡ್ಡ ಸವಾಲಾಗಿದೆ. ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ಬಿಗ್ ಬಾಸ್ ನೀಡಿದ ಸೂಚನೆಯಂತೆ, ಮನೆ ತುಂಬಾ ಕಸ ಚೆಲ್ಲಿ, ಅದನ್ನು ಗಬ್ಬು ಮಾಡಿದ್ದಾರೆ. ಮನೆಯಲ್ಲಿ ಕಸದ ರಾಶಿಯನ್ನು ನೋಡಿ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದಾರೆ. ಆದರೆ, ಇದು ಆಟದ ಒಂದು ಭಾಗ ಎಂದು ಅರಿತು, ಮನೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಇಡೀ ಮನೆಯನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿದರೆ, ಐಷಾರಾಮಿ ಬಜೆಟ್ ಪಡೆಯುವ ಅವಕಾಶ ಅವರಿಗೆ ಸಿಗಲಿದೆ. ಗಿಲ್ಲಿ ನಟ ಸೇರಿದಂತೆ ರಜತ್, ಚೈತ್ರಾ, ರಘು, ಸ್ಪಂದನಾ, ಕಾವ್ಯ ಶೈವ ಹಾಗೂ ಇತರೆ ಎಲ್ಲ ಸದಸ್ಯರು ಪೊರಕೆ ಹಿಡಿದು ಕಸ ಗುಡಿಸುವಲ್ಲಿ ನಿರತರಾಗಿದ್ದಾರೆ. ಪ್ರೋಮೋದಲ್ಲಿ ಕಾಣಿಸುವಂತೆ, ಈ ಕಾರ್ಯ ಎಷ್ಟು ಕಷ್ಟಕರವಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ಪರ್ಧಿಗಳಿಗೆ ಐಷಾರಾಮಿ ಬಜೆಟ್ ಸಿಗುವುದೇ ಅಥವಾ ಇಲ್ಲವೇ ಎಂಬ ಕುತೂಹಲ ಇದೀಗ ಮನೆ ಮಾಡಿದೆ.
ಇತ್ತ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ತಾವು ಚೆಲ್ಲಿದ ಕಸವನ್ನು ಸ್ಪರ್ಧಿಗಳು ಕ್ಲೀನ್ ಮಾಡಲು ಪಡುತ್ತಿರುವ ಪಾಡನ್ನು ಸೀಕ್ರೆಟ್ ರೂಮ್‌ನಿಂದಲೇ ಕುಳಿತು ವೀಕ್ಷಿಸುತ್ತಿದ್ದಾರೆ. ಸ್ಪರ್ಧಿಗಳ ಕಷ್ಟವನ್ನು ನೋಡಿ ಬಿದ್ದು ಬಿದ್ದು ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.
PublicNext
19/12/2025 02:23 pm