ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳ ಜನನಕ್ಕೆ ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ ಅಪ್ಪನ ವಿಡಿಯೋ ವೈರಲ್

"ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು ಹುಟ್ಟುತ್ತದೆ, ಹೆಣ್ಣು ಮಕ್ಕಳನ್ನು ಪಡೆಯಲು ನೂರು ಜನ್ಮದ ಪುಣ್ಯ ಮಾಡಿರಬೇಕು" ಎಂಬಂತಹ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ. ಹೀಗಾಗಿ ಮನೆಗೆ ಹೆಣ್ಣು ಮಗುವಿನ ಆಗಮನದ ಸುದ್ದಿಯು ಯಾವಾಗಲೂ ಸಂತಸ ತರುತ್ತದೆ. ಕುಟುಂಬದ ಸದಸ್ಯರು ಖುಷಿಯಿಂದ ಕುಣಿದು ಸಂಭ್ರಮಿಸುವ ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.

ಆದರೆ, ಇಲ್ಲೊಬ್ಬ ತಂದೆಯ ಸಂತಸ ಎಲ್ಲೆ ಮೀರಿತ್ತು. ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಹೆಣ್ಣು ಮಗಳಿಗೆ ಅಪ್ಪನಾದೆ ಎಂಬ ಆ ತಂದೆಯ ಖುಷಿ ಎಲ್ಲರಿಗೂ ಮಾದರಿಯಾಗಿದೆ.

'Positive fan' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಆಸ್ಪತ್ರೆಯ ದೃಶ್ಯವಿದೆ. ನವಜಾತ ಶಿಶುವನ್ನು ಎತ್ತಿಕೊಂಡು ಮಹಿಳೆಯೊಬ್ಬರು ಸಂತಸದಿಂದ ಬರುತ್ತಿರುವುದನ್ನು ಕಾಣಬಹುದು. ಅವರ ಸುತ್ತಲೂ ಇದ್ದ ಇತರ ಮಹಿಳೆಯರು ಕೂಡ ಖುಷಿಯಿಂದ ನೃತ್ಯ ಮಾಡುತ್ತಿದ್ದಾರೆ. ಇದೇ ವೇಳೆ, ಹೆಣ್ಣು ಮಗು ಹುಟ್ಟಿತು ಎಂಬ ಸಂತಸದಲ್ಲಿ ತಂದೆಯೂ ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ವಿಡಿಯೋ ಈಗಾಗಲೇ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದನ್ನು ನೋಡಿದ ಅನೇಕರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. "ಇಂದು ನಾನು ನೋಡಿದ ಅತ್ಯುತ್ತಮ ವಿಷಯ" ಎಂದು ಒಬ್ಬ ಬಳಕೆದಾರರು ಬರೆದಿದ್ದರೆ, ಮತ್ತೊಬ್ಬರು "ಜೀವನದಲ್ಲಿ ಗೆದ್ದಂತಹ ಅನುಭವ, ಅವರ ನಗುವೇ ಎಲ್ಲವನ್ನೂ ಹೇಳುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಮಗಳ ಆಗಮನವನ್ನು ಎಲ್ಲರಿಗೂ ಇಷ್ಟೊಂದು ಸಂಭ್ರಮಿಸಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ವಿಡಿಯೋದಲ್ಲಿನ ತಂದೆಯ ಖುಷಿಯನ್ನು ಶ್ಲಾಘಿಸಿದ್ದಾರೆ.

Edited By : Nirmala Aralikatti
PublicNext

PublicNext

20/12/2025 09:55 am

Cinque Terre

16.95 K

Cinque Terre

3