ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆಗೆ 2 ಗಂಟೆಗೂ ಮುನ್ನ ಮಾಜಿ ಪ್ರಿಯಕರನ ಭೇಟಿ ಮಾಡಿದ ವಧು : ಭಾವನಾತ್ಮಕ ವಿದಾಯ

ಕೆಲವು ಸಂಬಂಧಗಳನ್ನು ಮರೆಯುವುದು ಸುಲಭವಲ್ಲ. ಇತ್ತೀಚೆಗೆ ವೈರಲ್‌ ಆದ ವಿಡಿಯೋವೊಂದರಲ್ಲಿ ಮದುವೆಗೆ ಕೇವಲ ಎರಡು ಗಂಟೆ ಬಾಕಿ ಇರುವಾಗ ವಧುವೊಬ್ಬಳು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿ, ಭಾವನಾತ್ಮಕ ವಿದಾಯ ಹೇಳಿದ ಘಟನೆ ನಡೆದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ವಧು ತನ್ನ ಮದುವೆಯ ಅಲಂಕಾರದಲ್ಲಿಯೇ ತನ್ನ ಆಪ್ತ ಗೆಳೆಯನೊಂದಿಗೆ ಕಾರಿನಲ್ಲಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಆಕೆಯ ಗೆಳೆಯ "ಹೊಸ ಜೀವನಕ್ಕೆ ಕಾಲಿಡುವ ಮುನ್ನ ವಧು ತನ್ನ ಮಾಜಿ ಪ್ರಿಯಕರನಿಗೆ ಭಾವನಾತ್ಮಕ ಮುಕ್ತಾಯ ನೀಡಲು ಹೋಗುತ್ತಿದ್ದಾಳೆ" ಎಂದು ಮಾತನಾಡಿರುವುದು ವಿಡಿಯೋದಲ್ಲಿದೆ.

ಇನ್ನೂ ವಧು ಕಾರಿನಿಂದ ಇಳಿದು ತನ್ನ ಮಾಜಿ ಪ್ರಿಯತಮನನ್ನು ಭೇಟಿಯಾಗಿದ್ದಾಳೆ. ದೂರದಿಂದಲೇ, ಇಬ್ಬರೂ ಭಾವನಾತ್ಮಕ ಸಂಭಾಷಣೆಯಲ್ಲಿ ನಡೆಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರ ನಡುವಿನ ಮಾತುಗಳು ಯಾರಿಗೂ ಕೇಳಿಸದಿದ್ದರೂ, ಅವರ ಮನಸ್ಸಿನ ನೋವು ಮತ್ತು ಯಾತನೆ ಸ್ಪಷ್ಟವಾಗಿದೆ . ಕೊನೆಯದಾಗಿ ಇಬ್ಬರೂ ಅಪ್ಪಿಕೊಂಡು ವಿದಾಯ ಹೇಳಿ ದೂರವಾಗಿದ್ದಾರೆ.

ಮಾಜಿ ಪ್ರಿಯತಮನನ್ನು ಭೇಟಿಯಾದ ನಂತರ ವಧು ಕಣ್ಣೀರು ಹಾಕುತ್ತಾ ಗೆಳೆಯನ ಕಾರಿನಲ್ಲಿ ಕುಳಿತಿದ್ದಾಳೆ. ಆಕೆಯ ಸ್ನೇಹಿತ, "ನೀನು ನಿನ್ನ ನಿರ್ಧಾರವನ್ನು ಬದಲಾಯಿಸಿ ಮಾಜಿ ಪ್ರಿಯಕರನನ್ನು ಮದುವೆಯಾಗಲು ಬಯಸುತ್ತೀಯಾ?" ಎಂದು ಕೇಳಿದ್ದಾನೆ. ಇದಕ್ಕೆ ವಧು ಮೌನವಾಗಿ, ಕಾರು ಚಲಾಯಿಸಿ ವಿವಾಹ ನಡೆಯುವ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾಳೆ. ಈ ಮೂಲಕ ಆಕೆ ತನ್ನ ಮದುವೆಯ ನಿರ್ಧಾರವನ್ನು ಮುಂದುವರಿಸಿದ್ದಾಳೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ವಧುವಿನ ನೈತಿಕತೆ ಮತ್ತು ನಿರ್ಧಾರದ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. "ಈ ನಿಯತ್ತು ಮೊದಲು ಎಲ್ಲಿ ಹೋಗಿತ್ತು?" ಎಂದು ಕೆಲವರು ಕೇಳಿದ್ದರೆ, ಮತ್ತೊಬ್ಬರು, "ಆಕೆ ಮಾಜಿ ಪ್ರಿಯಕರನನ್ನೇ ಮದುವೆ ಆಗಬಹುದಿತ್ತು" ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ಈಗಿನ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ನಿಜವಾದ ಪ್ರೀತಿಗೆ ಬೆಲೆ ಇಲ್ಲ" ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ವಧುವಿನ ಗುರುತು ಬಹಿರಂಗಗೊಂಡಿದ್ದು, ಮುಂದಕ್ಕೆ ಆಕೆ ತನ್ನ ಅತ್ತೆ-ಮಾವ ಮತ್ತು ಪತಿಯನ್ನು ಹೇಗೆ ಎದುರಿಸಬಹುದು ಎಂದು ಪ್ರಶ್ನಿಸಿದ್ದಾರೆ.

Edited By : Nirmala Aralikatti
PublicNext

PublicNext

20/12/2025 01:16 pm

Cinque Terre

8.03 K

Cinque Terre

0