ಲಖನೌ: ಬದುಕಲ್ಲಿ ಸಾಹಸ ಮಾಡ್ಬೇಕು ನಿಜ. ಆದ್ರೆ ದುಸ್ಸಾಹಸಕ್ಕೆ ಕೈ ಹಾಕಬಾರದು. ದುಸ್ಸಾಹಸ ಮಾಡುವುದೂ ಒಂದೇ.. ಸಾವಿನ ಸಹವಾಸ ಮಾಡುವುದೂ ಒಂದೇ. ಉತ್ತರ ಪ್ರದೇಶದ ಹಾಪುರ ನಗರದ ಬಳಿ ಯುವಕನೊಬ್ಬ ಹೆದ್ದಾರಿಯ ಮೇಲ್ಸೇತುವೆಗೆ ಜೋತು ಬಿದ್ದು ಚಿನ್ ಅಪ್ ವ್ಯಾಯಾಮ ಮಾಡಿದ್ದಾನೆ.
ಉತ್ತರ ಪ್ರದೇಶದ ದೆಹಲಿ-ಲಖನೌ ಹೆದ್ದಾರಿಯ ಹಾಪುರ ನಗರದ ಬಳಿ ಈ ಘಟನೆ ನಡೆದಿದೆ. ಯುವಕನ ಹುಚ್ಚಾಟದ ದೃಶ್ಯ ವೈರಲ್ ಆಗುತ್ತಿದೆ. ಈತ ಈ ರೀತಿ ಚಿನ್ ಅಪ್ ಮಾಡುವಾಗ ಕೆಳಗೆ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಅಪ್ಪಿತಪ್ಪಿ ಎಚ್ಚರ ತಪ್ಪಿದ್ರೆ ಸಾವಿನ ಮನೆ ಸೇರೋದು ನಿಶ್ಚಿತ. ಈ ಪುಗಸಟ್ಟೆ ಸಾಹಸ ಬೇಕಿತ್ತಾ? ಎಂದು ವಿಡಿಯೋ ನೋಡಿದ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
PublicNext
20/12/2025 06:35 pm
LOADING...