ಕೋಲ್ಕತ್ತಾ : ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ದಟ್ಟ ಮಂಜಿನ ಕಾರಣದಿಂದಾಗಿ ಲ್ಯಾಂಡ್ ಆಗಲು ಸಾಧ್ಯವಾಗದೆ ಕೋಲ್ಕತ್ತಾಗೆ ಮರಳಿತು. ಇದರಿಂದಾಗಿ ಪ್ರಧಾನಿ ಮೋದಿ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದರು.
ದೆಹಲಿಯಿಂದ ಕೋಲ್ಕತ್ತಾಗೆ ಆಗಮಿಸಿದ್ದ ಪ್ರಧಾನಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತಾಹೆರ್‌ಪುರ ಹೆಲಿಪ್ಯಾಡ್‌ನಲ್ಲಿ ಮಧ್ಯಾಹ್ನ ಇಳಿಯಬೇಕಿತ್ತು. ಆದರೆ, ದಟ್ಟ ಮಂಜು ಕವಿದಿದ್ದರಿಂದ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಮುನ್ನ ಹಲವು ಸುತ್ತು ಆಕಾಶದಲ್ಲಿ ಹಾರಾಡಿತು. ಲ್ಯಾಂಡಿಂಗ್ ಅಸಾಧ್ಯ ಎಂದು ಪೈಲಟ್‌ಗೆ ಮನವರಿಕೆಯಾದ ತಕ್ಷಣ, ಹೆಲಿಕಾಪ್ಟರ್ ಕೋಲ್ಕತ್ತಾ ಕಡೆಗೆ ವಾಪಸ್ ತಿರುಗಿತು.
ವರ್ಚುವಲ್ ಭಾಷಣದಲ್ಲಿ ಕ್ಷಮೆಯಾಚನೆ
ತಮ್ಮ ವರ್ಚುವಲ್ ಭಾಷಣದ ಆರಂಭದಲ್ಲಿ, ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ್ದಕ್ಕೆ ಪ್ರಧಾನಿ ಮೋದಿ ಕ್ಷಮೆಯಾಚಿಸಿದರು.
ನಂತರ ತಮ್ಮ ಭಾಷಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಅವರು, ತೃಣಮೂಲ ಪಕ್ಷವು ನುಸುಳುಕೋರರನ್ನು ಬೆಂಬಲಿಸುತ್ತದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ವಿರೋಧಿಸುತ್ತಿರುವುದಕ್ಕೆ ಇದೇ ಕಾರಣ ಎಂದು ಪ್ರತಿಪಾದಿಸಿದರು. ರಾಜ್ಯದಲ್ಲಿ 'ಡಬಲ್-ಎಂಜಿನ್ ಸರ್ಕಾರಕ್ಕೆ' ಅವಕಾಶ ನೀಡುವಂತೆ ಅವರು ಜನತೆಗೆ ಮನವಿ ಮಾಡಿದರು.
PublicNext
20/12/2025 06:02 pm
LOADING...