ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿಯಾಳ: ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪರೂಪದ ದೃಶ್ಯ

ಹಳಿಯಾಳ: ಜೋಯಿಡಾ ತಾಲ್ಲೂಕಿನ ಕುಳಗಿ ಸಮೀಪದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡಿ ಕಾಣಿಸಿಕೊಂಡ ಘಟನೆ ನಡೆದಿದೆ. ಆಹಾರ ಹುಡುಕುತ್ತ ಅರಣ್ಯ ರಸ್ತೆಯ ಅಂಚಿನಲ್ಲಿ ಸಂಚರಿಸುತ್ತಿದ್ದ ಕರಡಿ ಜಂಗಲ್ ಸಫಾರಿಗೆ ಬಂದ ಪ್ರವಾಸಿಗರ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಹಿಡಿಯಲಾಗಿದೆ.

ಅಪರೂಪದ ಈ ದೃಶ್ಯ ನೋಡುಗರ ಕಣ್ಮನ ಸೆಳೆದಿದ್ದು, ಕರಡಿಯನ್ನು ಕಂಡ ಪ್ರವಾಸಿಗರಲ್ಲಿ ಕುತೂಹಲದ ಜೊತೆಗೆ ಸ್ವಲ್ಪ ಆತಂಕವೂ ಕಂಡುಬಂದಿದೆ. ಕರಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲಕಾಲ ಅರಣ್ಯ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗೊಂಡಿತು.

ಕಾಳಿ ಹುಲಿ ಸಂರಕ್ಷಿತ ಪ್ರದೇಶವು ವನ್ಯಜೀವಿಗಳ ಸಹಜ ವಾಸಸ್ಥಳವಾಗಿರುವ ಹಿನ್ನೆಲೆಯಲ್ಲಿ, ಅರಣ್ಯ ಪ್ರದೇಶದಲ್ಲಿ ಸಂಚರಿಸುವವರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Edited By : Manjunath H D
Kshetra Samachara

Kshetra Samachara

18/01/2026 04:40 pm

Cinque Terre

10.16 K

Cinque Terre

1