ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಜಗಳ ಬಿಡಿಸಲು ಬಂದವನಿಗೆ ಚಾಕು ಇರಿತ, ಖ್ಯಾತ ಜ್ಯೋತಿಷಿ ಕಮಲಾಕರ ಗುರೂಜಿ ಸೇರಿ 6 ಜನ ಅರೆಸ್ಟ್

ಸಿದ್ದಾಪುರ : ಪತಿ -ಪತ್ನಿ ಕಲಹದಲ್ಲಿ ಗಲಾಟೆ ಬಿಡಿಸಲು ಬಂದ ಭಾವನಿಗೆ ಯುವಕರ ಗುಂಪಿನಿಂದ ಚಾಕು ಇರಿದು ಹತ್ಯೆ ಮಾಡಿ ಇಬ್ಬರಿಗೆ ಗಾಯವಾದ ಘಟನೆ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದೆ.

ವಸಂತ್ ನಾಯ್ಕ (43)ಮೃತ ಪಟ್ಟ ದುರ್ದೈವಿ. ವಸಂತ್ ತಮ್ಮ ಮಹೇಶ್ ಹಾಗೂ ಕುಮಾರ್ ಇಬ್ಬರಿಗೆ ಗಂಭೀರ ಗಾಯವಾಗಿದೆ. ಸುಚಿತ್ರ, ಖ್ಯಾತ ಜ್ಯೋತಿಷಿ ಕಮಲಾಕರ್ ಗುರೂಜಿ ಮತ್ತು ಆಕೆಯೊಂದಿಗೆ ಬಂದ ನಾಲ್ವರು ಯುವಕರ ತಂಡದಿಂದ ಕೃತ್ಯ ನಡೆದಿದೆ. ಆರೋಪಿ ಸುಚಿತ್ರ ಶಿವಮೊಗ್ಗದಲ್ಲಿ ಜ್ಯೋತಿಷಿ ಕಮಲಾಕರ ಗುರೂಜಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಮಗಳು ಸುಮಶ್ರೀ ತಾಯಿ ಮತ್ತು ಗುರೂಜಿ ಹಿಂಸೆ ನೀಡುತ್ತಿದ್ದಾರೆ ಎಂದು ತಂದೆಯಾದ ಮಹೇಶ ಬಳಿ ಬಂದಿದ್ದಳು.

ಮಗಳನ್ನು ಹುಡುಕುತ್ತಾ ಬಂದ ತಾಯಿ ಸುಚಿತ್ರ ಹಾಗೂ ಗುರೂಜಿಗೆ ವಸಂತ್ ಅವರ ಮನೆಯಲ್ಲಿ ಸುಮಶ್ರೀ ಇರುವುದು ಗೊತ್ತಾಗುತ್ತದೆ. ತಂಡದೊಂದಿಗೆ ಬಂದ ಸುಚಿತ್ರ ಹಾಗೂ ಕಮಲಾಕರ್ ಗುರೂಜಿ ಅವರು ಮಗಳನ್ನು ವಾಪಸ್ ಕರೆದುಕೊಂಡು ಹೋಗುವುದಾಗಿ ಹೇಳಿದಾಗ ಗಲಾಟೆ ಆಗಿದೆ. ಈ ಸಂದರ್ಭದಲ್ಲಿ ಚಾಕುವಿನಿಂದ ಮೂವರಿಗೆ ಹಲ್ಲೆ ಮಾಡುತ್ತಾರೆ. ಘಟನೆಯಲ್ಲಿ ವಸಂತ ಮೃತ ಪಟ್ಟರೆ ಕುಮಾರ ಮತ್ತು ಮಹೇಶಗೆ ಗಂಭೀರ ಗಾಯಗಳಾಗಿ ಸದ್ಯ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Vinayak Patil
PublicNext

PublicNext

03/02/2026 03:55 pm

Cinque Terre

7.48 K

Cinque Terre

0

ಸಂಬಂಧಿತ ಸುದ್ದಿ