ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪ್ರೀತಿ ಹೆಸರಲ್ಲಿ ವಂಚನೆ: ರಿಶೆಲ್ ಸಾವಿಗೆ ಕಾರಣನಾದ ಚಿರಾಗ್ ಚೆನ್ನೈನಲ್ಲಿ ಸೆರೆ

ಕಾರವಾರ: ತಾಲೂಕಿನ ಕದ್ರಾದ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಚಿರಾಗ್ ಕೊಠಾರಕರನನ್ನು ಕಾರವಾರ ಪೊಲೀಸರ ವಿಶೇಷ ತಂಡ ಚೆನ್ನೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕದ್ರಾದ ನಿವಾಸಿ ರಿಶೆಲ್ ಡಿಸೋಜಾ ಜನವರಿ 9ರಂದು ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ ಅವರ ಪುತ್ರ ಚಿರಾಗ್ ಕೊಠಾರಕರ ಮತ್ತು ರಿಶೆಲ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಚಿರಾಗ್‌ನ ಕಿರುಕುಳದಿಂದಲೇ ರಿಶೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಾದ ಬಳಿಕ ಕ್ರೈಸ್ತ ಸಂಘಟನೆಗಳು ಆರೋಪಿ ಚಿರಾಗ್‌ನನ್ನು ಕೂಡಲೇ ಬಂಧಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರವಾರ ಪೊಲೀಸ್ ಅಧಿಕಾರಿಗಳ ತಂಡ ಕಳೆದ ಎರಡು ವಾರಗಳಿಂದ ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ಚಿರಾಗ್‌ಗಾಗಿ ತೀವ್ರ ಹುಡುಕಾಟ ನಡೆಸಿತ್ತು. ಅಂತಿಮವಾಗಿ, ಗುರುವಾರ ಆರೋಪಿಯನ್ನು ಚೆನ್ನೈನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕದ್ರಾ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಬಂಡೀವಡ್ಡರ್ ಅವರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು.

Edited By : PublicNext Desk
PublicNext

PublicNext

30/01/2026 04:13 pm

Cinque Terre

3.14 K

Cinque Terre

0

ಸಂಬಂಧಿತ ಸುದ್ದಿ