ಕಾರವಾರ : ಹೊರ ಜಿಲ್ಲೆಗಳಿಂದ ಬಂದ ಒಳನಾಡು ಮೀನುಗಾರರು ಕಾಳಿ ನದಿಯಲ್ಲಿ ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುತ್ತಿದ್ದು ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಗಿ ಮೀನುಗಾರರ ಸಹಕಾರ ಸಂಘವು ಆಗ್ರಹಿಸಿದೆ.
ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಮೀನುಗಾರಿಕೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಕಾರವಾರ ತಾಲೂಕಿನ ಕದ್ರಾ–ಮಲ್ಲಾಪುರ, ಬೋಳೆ, ಇರಪಾಗೆ, ಬಾಳ್ನಿ, ಕೆರವಡಿ, ಖಾರ್ಗಾ ಹಾಗೂ ಉಳಗಾ ಪ್ರದೇಶಗಳಲ್ಲಿ ವಾಸಿಸುವ ಪಾಗಿ ಸಮಾಜದ ಮೀನುಗಾರರು ಕಾಳಿ ನದಿಯಲ್ಲಿ ಮೀನು ಹಿಡಿದು ಬದುಕುತ್ತಿದ್ದಾರೆ. ಆದರೆ ಕೆಲವು ವರ್ಷಗಳಿಂದ ಪರಿಸರ ಅಸಮತೋಲನ, ಹವಾಮಾನ ವೈಪರೀತ್ಯ ಹಾಗೂ ಕಾಳಿ ನದಿಗೆ ಅಣೆಕಟ್ಟು ನಿರ್ಮಾಣ ಸೇರಿದಂತೆ ಹಲವು ಕಾರಣಗಳಿಂದ ಮತ್ಸ್ಯಕ್ಷಾಮ ಉಂಟಾಗಿದೆ.
ಹೊರ ಜಿಲ್ಲೆಗಳಿಂದ ಬಂದ ಒಳನಾಡು ಮೀನುಗಾರರು ಅವೈಜ್ಞಾನಿಕ ವಿಧಾನಗಳಲ್ಲಿ ಮೀನುಗಾರಿಕೆ ನಡೆಸಿ, ಸಂತಾನೋತ್ಪತ್ತಿಗೆ ಬಂದಿರುವ ಮೀನುಗಳು ಹಾಗೂ ಮೀನು ಮರಿಗಳನ್ನು ಹಿಡಿಯುತ್ತಿರುವುದು ಮತ್ಸ್ಯಕ್ಷಾಮ ಹೆಚ್ಚಾಗಲು ಕಾರಣವಾಗುತ್ತಿದೆ. ಅಂತವರಿಗೆ ಮೀನುಗಾರಿಕೆ ಮಾಡಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
PublicNext
03/02/2026 05:14 pm
LOADING...