ಸಿದ್ದಾಪುರ : ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಳ ಹಾಗೂ ನಾಯ್ಕಾರ್ ಗ್ರಾಮದಲ್ಲಿ ಸ್ಥಳೀಯರಿಗೆ ತಿಳಿಯದಂತೆ ಅರಣ್ಯದಲ್ಲಿ ಮರಗಳಿಗೆ ಹಾಗೂ ರಸ್ತೆಯಲ್ಲಿನ ವಿದ್ಯುತ್ ಕಂಬಗಳಿಗೆ ಮಾರ್ಕ್ ಮಾಡಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.
ಯಾವ ಸಮಯದಲ್ಲಿ ಬಂದು ಮಾರ್ಕಿಂಗ್ ಮಾಡಿದ್ದಾರೆ ಎನ್ನುವುದು ಸಾರ್ವಜನಿಕರ ಗಮನಕ್ಕೆ ಬಾರದಿರುವುದು ಮತ್ತು ಜನರಿಗೆ ಮಾಹಿತಿ ನೀಡದೆ ಈ ರೀತಿ ಮಾಡಿರುವುದು ಜನರ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಸದ್ಯ ತಾಲೂಕಿನಲ್ಲಿ ಚರ್ಚೆ ನಡೆಯುತ್ತಿರುವ ಅಘನಾಶಿನಿ ನದಿ ತಿರುವು ಯೋಜನೆಗೆ ಕಲ್ಲಾಳದಲ್ಲಿ ಇಳಿಮನೆ ಹೊಳೆಗೆ ಚಿಕ್ಕ ಡ್ಯಾಮ್ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಸಾಮಾಜಿಕ ಮುಖಂಡರಾದ ಸುಭಾಷ್ ಚಂದ್ರ ಹಾಗೂ ಸುನಿಲ್ ನಾಯ್ಕ್ ಅವರು ಮಾತನಾಡಿ ಪ್ರಾಣ ಬಿಟ್ಟೆವು ಆದರೆ ಯೋಜನೆಗೆ ನಾವು ಅವಕಾಶ ಕೊಡುವುದಿಲ್ಲ ಹೋರಾಟ ನಡೆಸುತ್ತೇವೆ ಜೊತೆಯಲ್ಲಿ ಈ ರೀತಿ ಮಾರ್ಕ್ ಮಾಡಿರುವುದರ ಕುರಿತು ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಜನರಲ್ಲಿ ಉಂಟಾದ ಆತಂಕ ದೂರ ಮಾಡಬೇಕು ಮತ್ತು ಸರಿಯಾದ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.
Kshetra Samachara
01/02/2026 04:49 pm
LOADING...