ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡಗೋಡ : ಟ್ರಜರಿಯಲ್ಲಿದ್ದ 15 ಗ್ರಾಂ. ಬಂಗಾರ ಕದ್ದ ಕಳ್ಳ ಅರೆಸ್ಟ್‌

ಮುಂಡಗೋಡ : ಪಟ್ಟಣದ ಅಂಬೇಡ್ಕರ ಓಣಿಯ ಮನೆಯೊಂದರ ಟ್ರಜರಿಯಲ್ಲಿಟ್ಟಿರುವ 15 ಗ್ರಾಂ. ಬಂಗಾರ ಕದ್ದ ಅಂತರ ಜಿಲ್ಲಾ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಅಂಬೇಡ್ಕರ ಓಣಿಯ ಬಸವರಾಜ ಚಲವಾದಿ ಎಂಬುವರ ಮನೆಯ ಬಾಗಿಲು ಮುರಿದು ಟ್ರಜರಿಯಲ್ಲಿಟ್ಟಿರುವ ಬಂಗಾರದ 2.44000 ಸಾವಿರ ಮೌಲ್ಯದ ವಸ್ತುಗಳು ಕಳ್ಳತನ ಮಾಡಲಾಗಿದೆ

ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಗೊಂಡಿದ್ದು ಮುಂಡಗೋಡ ಪೊಲೀಸರು ಪ್ರಕರಣವನ್ನು ತನಿಖೆ ನಡೆಸಿ ಕಳ್ಳನನ್ನು ಪತ್ತೆ ಹಚ್ಚಿದಾಗ ಅಂತರ ಜಿಲ್ಲಾ ಕಳ್ಳ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿಯ, ಮಂಜುನಾಥ ಬಸವಂತಪ್ಪ ನಾಯಕ (34) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ.

ಪಟ್ಟಣದ ಹಳೂರ ಮಾರಿಕಾಂಬಾ (ದ್ಯಾಮವ್ವ) ಜಾತ್ರೆಯ ನಿಮಿತ್ತವಾಗಿ 5 ನೇ ಹೊರಬೀಡು ದಿನದಂದು ಪಟ್ಟಣದಲ್ಲಿರುವ ಮನೆಗಳಿಗೆ ಬೀಗ ಹಾಕಿ ಹೋಗಿದ್ದ ಸಂದರ್ಭದಲ್ಲಿ ಕಳ್ಳನ ಕೈ ಚಳಕ ಮನೆಯಲ್ಲಿ ತೋರಿಸಿದ್ದಾನೆ.ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದಮಂಜುನಾಥ ಚಿಂಚಲಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮತ್ತು ಕಲ್ಲಪ್ಪ ಹೊನ್ನಿಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

01/02/2026 09:27 am

Cinque Terre

7.26 K

Cinque Terre

0

ಸಂಬಂಧಿತ ಸುದ್ದಿ