ಗದಗ : ಲಕ್ಷ್ಮೇಶ್ವರ ಪಟ್ಟಣದ ರಸ್ತೆಯಲ್ಲಿರುವ ಹಾವಳಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಏರ್ಪಡಿಸಿದ ಹಿಂದೂ ಸಮ್ಮೇಳನ ಹಾಗೂ ಭವ್ಯ ಶೋಭಾ ಯಾತ್ರೆಗೆ ಸಂಸದ ಬಸವರಾಜ ಬೊಮ್ಮಾಯಿರವರು ಆಂಜನೇಯ ಸ್ವಾಮಿ ಹಾಗೂ ಗೋ ಪೂಜೆ ಮಾಡುವ ಮೂಲಕ ಚಾಲನೆಯನ್ನು ನೀಡಿದರು.
ಶೋಭಾಯಾತ್ರೆಯೂ ಹಾವಳಿ ಹನುಮಂತ ದೇವಸ್ಥಾನದಿಂದ ಪ್ರಾರಂಭಗೊಂಡು ಮಾರುಕಟ್ಟೆಯ ಪಾದಗಟ್ಟಿ, ಬಸ್ ನಿಲ್ದಾಣ,ಶಿಗ್ಲಿ ನಾಕಾದಿಂದ ಸೋಮೇಶ್ವರ ದೇವಸ್ಥಾನವರೆಗೆ ಸಕಲ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಮುಕ್ತಾಯಗೊಂಡಿತ್ತು.
ಈ ಸಂಧರ್ಭದಲ್ಲಿ ಶಾಸಕರಾದ ಡಾ ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ ಸಂಕನೂರ, ಭಾರತೀಯ ಜನತಾ ಪಕ್ಷದ ಶಿರಹಟ್ಟಿ ಮಂಡಳದ ಅಧ್ಯಕ್ಷರಾದ ಶ್ರೀ ಸುನೀಲ ಮಹಾಂತಶೆಟ್ಟರ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
18/01/2026 05:27 pm
LOADING...