ಶಿರಹಟ್ಟಿ: ತಾಲೂಕಿನ ಶ್ರೀಮಂತಗಡ ಗ್ರಾಮದ ಗುಡ್ಡದ ಮೇಲೆ ನೆಲೆಸಿರುವ ಆರಾಧ್ಯ ದೇವತೆ ಶ್ರೀ ಹೊಳಲಮ್ಮ ದೇವಿಯ ಮಹಾ ರಥೋತ್ಸವವು ಸಕಲ ವಾದ್ಯಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಪ್ರತಿ ವರ್ಷದಂತೆ ಭಾರತ ಹುಣ್ಣಿಮೆಯಂದು ನಡೆಯುವ ಈ ಜಾತ್ರಾ ಮಹೋತ್ಸವವು ಲಕ್ಷಾಂತರ ಭಕ್ತರ ಹರ್ಷೋದ್ಘಾರದ ಮಧ್ಯೆ, ಅತ್ಯಂತ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು.
ಭಕ್ತರ ಭಕ್ತಿ ಸಮರ್ಪಣೆ
ಸಹಸ್ರಾರು ಭಕ್ತರು "ಹೊಳಲಮ್ಮ ನಿನ್ನ ಹಾಲ್ ಖುದೋ... ಉದೋ ಉದೋ..." ಎಂಬ ಜಯಘೋಷ ಮೊಳಗಿಸುತ್ತಾ ಗುಡ್ಡವನ್ನು ಹತ್ತಿದರು. ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ರಥೋತ್ಸವದ ಸಂದರ್ಭದಲ್ಲಿ, ಅಪಾರ ಭಕ್ತರು ಸುಂದರವಾಗಿ ಶೃಂಗರಿಸಿದ ತೇರಿಗೆ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥ ಎಳೆಯುವಾಗ "ಶ್ರೀ ಹರ ಹರ ಮಹಾದೇವ... ಜೈ ಶಂಕರ ಶ್ರೀ ಹೊಳಲಮ್ಮ ದೇವಿ ಮಹಾರಾಜಕಿ ಜೈ" ಎಂಬ ಜಯಘೋಷಗಳು ಮುಗಿಲು ಮುಟ್ಟಿದವು.
ಭಕ್ತಿ ಭಾವದ ಅನಾವರಣ
ಈ ಮಹೋತ್ಸವದಲ್ಲಿ ಭಾಗವಹಿಸಿದ ಲಕ್ಷಾಂತರ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವಿಯ ದರ್ಶನ ಪಡೆದು, ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು.
PublicNext
02/02/2026 08:00 am
LOADING...