ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವ ಜನತೆಯು ಮಡಿವಾಳ ಮಾಚಿದೇವರ ಆದರ್ಶ, ಮೌಲ್ಯಗಳನ್ನು ಪಾಲಿಸಿಕೊಳ್ಳಿ

ಗದಗ: ವಿಶಿಷ್ಟ ವಚನ ಬರೆಯುವ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು, ತಮ್ಮ ಕಾಯಕದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದು ತಹಶೀಲ್ದಾರ ಧನಂಜಯ ಹೇಳಿದರು.

ಅವರು ತಹಶೀಲ್ದಾರ ಕಾರ್ಯಾಲಯದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡಿ ಮಾತನಾಡಿದರು.

ಯುವ ಜನತೆಯು ಮಡಿವಾಳ ಮಾಚಿದೇವರ ಆದರ್ಶ, ಮೌಲ್ಯಗಳನ್ನು ಪಾಲಿಸಬೇಕು. ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಯುವ ಪೀಳಿಗೆ ಎಚ್ಚೆತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಬೇಕು. ವಚನ ಸಾಹಿತ್ಯ ಓದುವ ಜನರು ಹೆಚ್ಚಬೇಕು. ಇದು ಪ್ರಸ್ತುತತೆಗೆ ಅನಿವಾರ್ಯ ಎಂದರೆ ತಪ್ಪಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗ್ರೇಟ.2 ತಹಶೀಲ್ದಾರ ಶಿರಸ್ತೆದಾರರು ಮಡಿವಾಳ ಸಮಾಜದ ಅಧ್ಯಕ್ಷ ಶಾಂತಪ್ಪ ಮಡಿವಾಳರ ಆಯ್ ಎಸ್ ಮಡಿವಾಳರ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

02/02/2026 02:55 pm

Cinque Terre

7.44 K

Cinque Terre

0

ಸಂಬಂಧಿತ ಸುದ್ದಿ