ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅದ್ಭುತ ಆವಿಷ್ಕಾರ: 3 ತಲೆಮಾರು ಪೂಜಿಸಿದ 7 ಹೆಡೆಯ ಸರ್ಪ ಲಕ್ಕುಂಡಿಯಲ್ಲಿ ಪತ್ತೆ!

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಮೂರು ತಲೆಮಾರುಗಳಿಂದ ಜಮೀನಿನ ಮಾಲೀಕರಿಂದ ಪೂಜಿಸಲ್ಪಡುತ್ತಿದ್ದ ಏಳು ಹೆಡೆಯ ಸರ್ಪವೊಂದು ಬಾವಿಯ ದಡದಲ್ಲಿ ಪತ್ತೆಯಾಗಿದೆ. ಈ ಅಪರೂಪದ ಪತ್ತೆ ಸ್ಥಳೀಯರಲ್ಲಿ ಕುತೂಹಲ ಮತ್ತು ಆಶ್ಚರ್ಯವನ್ನು ಮೂಡಿಸಿದೆ.

ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಈ ಉತ್ಖನನ ಕಾರ್ಯ ಭರದಿಂದ ಸಾಗಿದೆ.

ಸುಮಾರು 35 ಕಾರ್ಮಿಕರು ಈ ಕಾಮಗಾರಿಯಲ್ಲಿ ನಿರತರಾಗಿದ್ದು, ಭೂಮಿ ಅಗೆದಂತೆಲ್ಲಾ ಅನೇಕ ಪ್ರಾಚೀನ ಅವಶೇಷಗಳು ಹೊರಬರುತ್ತಿವೆ. ಇದುವರೆಗೆ ಹಲವು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ.

ಲಕ್ಕುಂಡಿಯ ಹೊರವಲಯದಲ್ಲಿರುವ ತೋಟದ ಮನೆಯೊಂದರಲ್ಲಿ ಐತಿಹಾಸಿಕ ಮಹತ್ವವುಳ್ಳ ಶಿಲೆಗಳನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ. ಮನೆಯ ಗೋಡೆಗಳಿಗೆ ಹಾಗೂ ತೋಟದ ಬಾವಿಯ ನಿರ್ಮಾಣಕ್ಕೆ ವಾಸ್ತುಶಿಲ್ಪದ ಶಿಲೆಗಳನ್ನು ಬಳಸಲಾಗಿದೆ.

ಈ ತೋಟದ ಮನೆಯ ಗೋಡೆಗಳಲ್ಲಿ ದ್ವಾರಪಾಲಕ, ಅಲಂಕಾರಿಕ ಶಿಲೆಗಳು ಮತ್ತು ದಾನ ಶಿಲೆಗಳು ಪತ್ತೆಯಾಗಿವೆ. ವಿಶೇಷವೆಂದರೆ, ಬಾವಿಯಲ್ಲಿ ಸರಸ್ವತಿಯ ಸುಂದರ ಶಿಲ್ಪಕಲೆಗಳು ಕಂಡುಬಂದಿವೆ. ಈ ಎಲ್ಲಾ ಶಿಲ್ಪಕಲೆಗಳು ಹೊಯ್ಸಳ ಕಾಲಕ್ಕೆ ಸೇರಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Edited By :
PublicNext

PublicNext

25/01/2026 02:57 pm

Cinque Terre

24.43 K

Cinque Terre

0

ಸಂಬಂಧಿತ ಸುದ್ದಿ