ಕೊಪ್ಪಳ : ಈಡಿಗ ಸಮುದಾಯಕ್ಕೆ ನ್ಯಾಯ ಕೊಡದ ಸಿದ್ದರಾಮಯ್ಯ ಕೇವಲ ಹಿಂದುಳಿದ ಸಮುದಾಯದ ಮೂರ್ನಾಲ್ಕು ನಾಯಕರನ್ನ ಜೊತೆಗೆ ಇಟ್ಟುಕೊಂಡು ನಾನೊಬ್ಬ ಹಿಂದುಳಿದ ಸಮುದಾಯದ ನಾಯಕ ಅಂತ ಹೇಳ್ತಿದ್ದಾರೆ.
ಸಮುದಾಯದ ಬೇಡಿಕೆ ಈಡೇರಿಸದೇ ಹೋದ್ರೆ ಸಿದ್ದರಾಮಯ್ಯ ಹಿಂದುಳಿದ ಸಮುದಾಯ ನಾಯಕ ಆಗೋದಕ್ಕೆ ಸಾಧ್ಯವಿಲ್ಲ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದಷ್ಟು ನ್ಯಾಯ ಸಿಕ್ಕಿದೆ. ಹೋರಾಟದ ಫಲವಾಗಿ 10ಕ್ಕೂ ಅಧಿಕ ನಿಗಮ ಘೋಷಣೆ ಮಾಡಿದ್ರು. ಆದ್ರೆ ಅನುದಾನ ಕೊಟ್ಟು ಮುಂದುವರೆಸಿಕೊಂಡು ಹೋಗ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ 10 ಕೋಟಿ ಹಣ ಕೊಟ್ಟಿದ್ದಾರೆ.
ಅದನ್ನೇ ಕಾಂಗ್ರೆಸ್ ಸರ್ಕಾರ ಕ್ರಿಯಾ ಯೋಜನೆ ರೂಪಿಸ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ ಅಂತ ಆಕ್ರೋಶ ಹೊರಹಾಕಿದ್ರು. ಅಷ್ಟೇ ಅಲ್ಲದೇ ಹಣ ಕೊಟ್ಟ ಮಠಗಳಿಗೆ ಪದೇ, ಪದೇ 5 ಕೋಟಿ, 10 ಕೋಟಿ, 20 ಕೋಟಿ ಕೊಡ್ತಾರೆ. ಇತರೇ ಹಿಂದುಳಿದ ಸಮುದಾಯದ ಮಠಗಳು ಅದೋಗತಿಗೆ ತಲುಪಿವೆ.
ಮಠ ಉದ್ಧಾರ ಮಾಡೋದಕ್ಕೆ ಆಗ್ತಿಲ್ಲ. ಅವುಗಳಿಗೂ ಅನುದಾನ ಕೊಡಬೇಕಲ್ಲವೇ...? ಸಿದ್ದರಾಮಯ್ಯ ಕೊಡುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ರು. ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಹಿಂದುಳಿದ ಸಮುದಾಯದ ನಾಯಕರು ಸಮಾಜದ ಪರ ಧ್ವನಿ ಎತ್ತಬೇಕು ಅಂತ ಶಾಸಕರು, ಸಚಿವರಿಗೆ ಪ್ರಣವಾನಂದ ಶ್ರೀಗಳು ಆಗ್ರಹಿಸಿದ್ರು.
PublicNext
21/01/2026 08:50 pm
LOADING...