ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಸಿಎಂ ಕೇವಲ ಒಂದು ಧರ್ಮ, ಒಂದು ಸಮುದಾಯ ಪರ ಕೆಲಸ ಮಾಡ್ತಿರೋದು ಸರಿಯಲ್ಲ- ಪ್ರಣವಾನಂದ ಶ್ರೀ

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ ಅಂತೇಳಿಕೊಂಡು ತಿರುಗಾಡುತ್ತಿದ್ದಾರೆ. ಆದ್ರೆ, ಕೇವಲ ಒಂದೇ ಸಮುದಾಯದವರಿಗೆ ಸೌಕರ್ಯ ಒದಗಿಸುವ ಕೆಲಸ ಮಾಡ್ತಿದ್ದಾರೆ. ಇದು ಸರಿಯಲ್ಲ ಅಂತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪ್ರಣವಾನಂದ ಶ್ರೀಗಳು ಆಕ್ರೋಶ ಹೊರಹಾಕಿದ್ದಾರೆ.

ಹಿಂದುಳಿದ ನಾಯಕರು ಅಂತೇಳುವ ಸಿದ್ದರಾಮಯ್ಯ ಈಡಿಗರ ಸಮಾಜ ಸೇರಿ ಎಲ್ಲ ಹಿಂದುಳಿದ ಸಮಾಜಕ್ಕೆ ಅನ್ಯಾಯ ಆಗ್ತಿದೆ. ತಾವು ಅಹಿಂದ ವರ್ಗದಿಂದ ಅಧಿಕಾರಕ್ಕೆ ಬಂದಿದ್ದೇನೆ ಅಂತೇಳಿಕೊಂಡು ಓಡಾಡ್ತಿದ್ದೀರಿ. ಮುಖ್ಯಮಂತ್ರಿ ಆಗಿ ದೇವರಾಜ ಅರಸು ಅವರ ರೆಕಾರ್ಡ್ ಮುರಿದಿದ್ದೇನೆ ಅಂತಿದ್ದೀರಿ. ಕೇವಲ ಒಂದು ಜಾತಿ - ಒಂದು ಧರ್ಮದ ಪರವಾಗಿ ತಾವು ಕೆಲಸ ಮಾಡ್ತಿದ್ದೀರಿ. ದೇವರಾಜ ಅರಸು ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಬೀದಿಗೆ ಬಂದಿರಲಿಲ್ಲ. ತಾವು ಸಮಾಜಕ್ಕೆ ಅನ್ಯಾಯ ಮಾಡಿದ್ರಿಂದ ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳು ಬೀದಿಗೆ ಬಂದು ಹೋರಾಟ ಮಾಡುವ ದುಸ್ಥಿತಿ ನಿರ್ಮಾಣ ಮಾಡಿದ್ದು ಸರಿಯಲ್ಲ ಅಂತ ಆಕ್ರೋಶ ಹೊರಹಾಕಿದ್ರು.

Edited By : Manjunath H D
PublicNext

PublicNext

21/01/2026 09:29 pm

Cinque Terre

31.55 K

Cinque Terre

0