ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: 2040ನೇ ಮದ್ಯವರ್ಜನ ಶಿಬಿರ

ಕೊಡಗು: ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಮಡಿಕೇರಿ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ ವತಿಯಿಂದ 2040ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಡಿಕೇರಿಯ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ ನಡೆಯಿತು.

ಜನಜಾಗೃತಿ ವೇದಿಕೆಯ, ಕರಾವಳಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಡಗು ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಎಂ. ಬಿ. ಅಭಿಮನ್ಯು ಕುಮಾರ್ ಅವರು ಜನಜಾಗೃತಿ ಕಾರ್ಯಕ್ರಮ, ಮದ್ಯವರ್ಜನ ಶಿಬಿರದ ಬಗ್ಗೆ ಮಾತನಾಡಿದರು.ಎ ಟಿ ರಂಗಸ್ವಾಮಿ, ಪಿ ಆರ್ ಸುನಿಲ್ ಕುಮಾರ್, ಎಎಸ್ಐ ಬಸಪ್ಪ, ಡಿ ನರಸಿಂಹ, ಪುರುಷೋತ್ತಮ್, ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ದಿನೇಶ್ ಮರಾಠಿ, ಪ್ರಸಿಲ್ಲಾ , ತುಷಾರ ಉಪಸ್ಥಿತರಿದ್ದರು. ಮಹೇಂದ್ರ ಸ್ವಾಗತಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

Edited By :
Kshetra Samachara

Kshetra Samachara

22/01/2026 10:04 pm

Cinque Terre

580

Cinque Terre

0

ಸಂಬಂಧಿತ ಸುದ್ದಿ