ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿಯಲ್ಲಿ ಕರ್ಕಶ ಶಬ್ದಕ್ಕೆ ಬ್ರೇಕ್: ಸಾರ್ವಜನಿಕರ ನಿಟ್ಟುಸಿರು!

ಮಡಿಕೇರಿ: ಮಡಿಕೇರಿ ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಜಿಪ್ಸಿ ವಾಹನವೊಂದನ್ನು ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾಹನದ ಮೂಲ ಸ್ವರೂಪವನ್ನು ಅನಧಿಕೃತವಾಗಿ ಬದಲಾಯಿಸಿ, ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣದ ವಿವರ

KA 01 NG 2730 ಸಂಖ್ಯೆಯ ಈ ಜಿಪ್ಸಿ ವಾಹನವು ಮಡಿಕೇರಿ ನಗರದಲ್ಲಿ ಕರ್ಕಶ ಶಬ್ದ ಮಾಡುತ್ತಾ, ರೇಸಿಂಗ್ ವೇಗದಲ್ಲಿ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಮಾಹಿತಿಯ ಆಧಾರದ ಮೇಲೆ, ಸಂಚಾರಿ ಠಾಣೆ ಪೊಲೀಸರು ಎಫ್.ಎಂ.ಸಿ. ಕಾಲೇಜು ಕಡೆಯಿಂದ ನಗರದ ಕಡೆಗೆ ಬರುತ್ತಿದ್ದಾಗ ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕನ ವಿರುದ್ಧ ಕಲಂ: 281 BNS 2023, 52, 53(1), 192, 184, 189 ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಅಧೀಕ್ಷಕರ ಮನವಿ

ವಾಹನಗಳ ಆರ್.ಸಿ. (ನೋಂದಣಿ ಪ್ರಮಾಣಪತ್ರ) ನಿಯಮಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಲಾಯಿಸುವುದು, ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್ ಅಥವಾ ಹಾರ್ನ್‌ಗಳನ್ನು ಅಳವಡಿಸಿಕೊಳ್ಳುವುದು, ಹಾಗೂ ವೀಲಿಂಗ್ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕ ಬಿಂದುಮಣಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ದಾಖಲಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Edited By : PublicNext Desk
PublicNext

PublicNext

03/02/2026 09:39 am

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ