ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗಿನಲ್ಲಿ ಸಂಚಲನ ಮೂಡಿಸಿದ ಅಶ್ಲೀಲ ವೀಡಿಯೋ ಪ್ರಕರಣ : ಓರ್ವ ಆರೋಪಿ ಅರೆಸ್ಟ್

ಮಡಿಕೇರಿ: ಓರ್ವ ಯುವಕನ ಜೊತೆಗಿನ ಹಲವು ಹುಡುಗಿಯರ ಅಶ್ಲೀಲ ವಿಡಿಯೋಗಳು ಕೊಡಗು ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲಿ ವೈರಲ್ ಆಗ್ತಿವೆ. ಇದು ಜಿಲ್ಲೆಯ ಮಾರ್ಯಾದೆಯನ್ನ ಹರಾಜು ಹಾಕ್ತಿರೋದಲ್ಲದೆ ಕೋಮು ಸೌಹಾರ್ದತೆಗೂ ಧಕ್ಕೆ ತರುವ ಚರ್ಚೆಯನ್ನ ಹುಟ್ಟುಹಾಕಿದೆ. ಸದ್ಯ ಅಲರ್ಟ್ ಆಗಿರುವ ಕೊಡಗು ಪೊಲೀಸರು ಕಠಿಣ ಕ್ರಮಕ್ಕೂ ಮುಂದಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆ ವಿಡಿಯೋಗಳದ್ದೇ ಚರ್ಚೆ.. ಗಲ್ಲಿ ಗಲ್ಲಿಯ ಎಲ್ಲರ ಮೊಬೈಲ್‌ಗಳಲ್ಲೂ ಆ ವಿಡಿಯೋಗಳು ಹರಿದಾಡ್ತಿವೆ.. ಸಾಮಾಜಿಕ ಜಾಲತಾಣಗಳಲ್ಲೂ ಇದರದ್ದೇ ಚರ್ಚೆ ನಡೀತಿದೆ. ಅವೇನು ಒಳ್ಳೆಯ ವಿಡಿಯೋಗಳಲ್ಲ... ಓರ್ವ ಯುವಕನ ಜೊತೆಗಿನ ಹಲವು ಹುಡುಗಿಯರ ಅಶ್ಲೀಲ ವಿಡಿಯೋಗಳು ಅವು.. ಸದ್ಯ ಈ ಬಗ್ಗೆ ಪೊಲೀಸ್ ದೂರು ಕೂಡ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ನಾಪೋಕ್ಲು ಪಟ್ಟಣದ 21 ವರ್ಷದ ಮೊಹಮ್ಮದ್ ಸವಾದ್ ಎಂಬ ಯುವಕನನ್ನು ಅರೆಸ್ಟ್ ಮಾಡಲಾಗಿದೆ.

ಸ್ಟೂಡೆಂಟ್ ಆಗಿರುವ ಮೊಹಮ್ಮದ್ ಸವಾದ್ ಹಲವು ಹುಡುಗಿಯರ ಸಂಗ ಬೆಳೆಸಿ, ಪ್ರೀತಿಯ ಬಲೆಗೆ ಬೀಳಿಸಿ ಅವರೊಂದಿಗೆ ಕಳೆದ ಕ್ಷಣಗಳ ಅಶ್ಲೀಲ ವಿಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ಮಾಡಿಟ್ಟುಕೊಂಡಿದ್ದ. ಆ ವಿಡಿಯೋಗಳು ವೈರಲ್ ಆಗ್ತಿದ್ದಂತೆ ಜಿಲ್ಲೆಯ ಜನ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ದೂರು ಕೂಡ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಅಲ್ಲದೆ ವಿಡಿಯೋ ವೈರಲ್ ಆದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು ಯುವಕ ಅನ್ಯಕೋಮಿನವನಾಗಿದ್ದು, ವಿಡಿಯೋದಲ್ಲಿರುವ ಹುಡುಗಿಯರು ಬಹುತೇಕರು ಒಂದೇ ಧರ್ಮದವರಾಗಿದ್ದರಿಂದ ಇದು ಕೋಮು ಸೌಹಾರ್ದತೆಗೂ ಧಕ್ಕೆ ತರುವಂತಹ ಚರ್ಚೆಗಳಿಗೆ ಕಾರಣವಾಗಿತ್ತು. ಹೀಗಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಒಟ್ಟಿನಲ್ಲಿ ಅದೇನೋ ಗಾದೆ ಹೇಳ್ತಾರಲ್ಲ, ಕ್ಷಣಿಕ ಸುಖಕ್ಕೆ ಅದೇನೋ ಕಳೆದುಕೊಂಡ್ರು ಅಂತ ಹಾಗೆ, ಯುವಕನಿಗಂತೂ ಅದೇ ಬೇಕಿತ್ತು, ಇನ್ನು ಈ ಹುಡುಗಿಯರಿಗೋ ಅದೇನು ಆಗಿತ್ತೋ ಏನೋ. ಸದ್ಯ ಸಮಾಜದಲ್ಲಿ ಮುಖ ಎತ್ಕೊಂಡು ಓಡಾಡದ ಹಾಗೆ ಮಾಡ್ಕೊಂಡಿದ್ದಾರೆ. ಕೊಡಗು ಪೊಲೀಸರು ವಿಡಿಯೋ ಹರಡೋದನ್ನ ತಡೆಯೋಕಂತು ಪ್ರಯತ್ನಿಸ್ತಿದಾರೆ. ಆದರೆ ಅದು ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತಾಗಿದೆ.

Edited By : Vinayak Patil
PublicNext

PublicNext

30/01/2026 09:21 am

Cinque Terre

22.14 K

Cinque Terre

0

ಸಂಬಂಧಿತ ಸುದ್ದಿ