ಮಡಿಕೇರಿ: ಪ್ರವಾಸೋದ್ಯಮದ ಅಮಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಮಡಿಕೇರಿ ನಗರಸಭೆ ಮುಂದಾಗಿದೆ. ನಗರದ ಹೋಟೆಲ್, ಸ್ಪೈಸಸ್ಗಳ ಮೇಲೆ ದಿಢೀರ್ ದಾಳಿ ನಡೆಸಿರುವ ನಗರಸಭೆಗೆ ಹೆಸರಿಲ್ಲದ ಹೋಮ್ಮೇಡ್ ಚಾಕೋಲೆಟ್ಗಳು, ಅಶುಚಿತ್ವದ ಕಿಚನ್ಗಳು, ಶಾಕ್ ಕೊಟ್ಟಿವೆ.
ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಮಡಿಕೇರಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅವರಿಗೆ ಆರೋಗ್ಯಕರವಾದ ವಾತಾವರಣ, ಆಹಾರದ ಮೂಲಕ ಸೂಕ್ತ ರೀತಿಯಲ್ಲಿ ಆತಿಥ್ಯ ಕೊಡೋದು ಕೊಡಗಿನ ಪಾಲಿಗೆ ಇತ್ತೀಚೆಗೆ ಸವಾಲು ಆಗ್ತಿದೆ ಅನ್ನೋ ದೂರುಗಳು ಬಂದಿದ್ವು. ಅದ್ರಲ್ಲೂ ಮಡಿಕೇರಿ ನಗರದ ಕೆಲ ಹೋಟೆಲ್ಗಳು ಹಾಗೂ ಸ್ಪೈಸಸ್ ಅಂಗಡಿಗಳ ಬಗ್ಗೆ ಪದೇ ಪದೇ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಮಡಿಕೇರಿ ಪ್ರವಾಸೋದ್ಯಮಕ್ಕೆ ಅದು ಕಪ್ಪುಚುಕ್ಕೆ ಆದಂತಿತ್ತು. ಹೀಗಾಗಿ ಅಲರ್ಟ್ ಆದ ಮಡಿಕೇರಿ ನಗರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ನಗರದ ಪ್ರಮುಖ ಹೋಟೆಲ್, ಸ್ಪೈಸಸ್ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಹೋಟೆಲ್ಗಳ ಆಹಾರ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿರುವ ನಗರಸಭೆ ಅಧಿಕಾರಿಗಳು ಲ್ಯಾಬ್‌ಗೆ ಕಳುಹಿಸಿದ್ದಾರೆ. ಜೊತೆಗೆ ಸ್ಟಿಕ್ಕರ್ ಇಲ್ಲದ ಸ್ಪೈಸಸ್ ಮಾರಾಟ ಮಾಡ್ತಿರೋದು ಬೆಳಕಿಗೆ ಬಂದಿದೆ. ಇಂತಹ ಚಾಕೊಲೇಟ್, ಫುಡ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‌ಗೆ ರವಾನೆ ಮಾಡಲಾಗಿದೆ.
ಇನ್ನು ಕೆಲ ಮಳಿಗೆಗಳಲ್ಲಿ ಒಂದು ಲೀಟರ್ ನೀರಿನ ಬಾಟಲ್ ಹಾಗೂ ನಿಷೇಧಿತ ಪ್ಲಾಸ್ಟಿಕ್ ಸೀಜ್ ಮಾಡಿರುವ ನಗರಸಭೆ ಅಕ್ರಮವೆಸಗಿದ ಮಳಿಗೆಗಳಲ್ಲಿ ಕೆಲವುಗಳಿಗೆ ದಂಡ ವಿಧಿಸಲಾಗಿದ್ದು, ಇನ್ನೂ ಕೆಲ ಅಂಗಡಿಗಳನ್ನು ಮುಚ್ಚಿಸಿ ಖಡಕ್ ವಾರ್ನಿಂಗ್ ಕೊಟ್ಟಿದೆ.
PublicNext
21/01/2026 03:57 pm
LOADING...