ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : HD ಕುಮಾರಸ್ವಾಮಿ ಮುಂದಿನ ಮುಖ್ಯ ಮಂತ್ರಿ?

ಕೋಲಾರ: ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವ ಸಂದರ್ಭ ಬಂದಲ್ಲಿ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಜೆಡಿಎಸ್ ಶಾಸಕರಾದ ವೆಂಕಟಶಿವಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಮರಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಒಳ್ಳೆಯ ಮನಸ್ಸುಳ್ಳ ರಾಜಕಾರಣಿ, ಜೊತೆಗೆ ಒಳ್ಳೆಯ ಆಡಳಿತಗಾರ, ಎಲ್ಲದಕ್ಕೂ ಮಿಗಿಲಾಗಿ ಜನರಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ, ಅವರು ರಾಜ್ಯ ರಾಜಕೀಯಕ್ಕೆ ಬಂದರೆ ರಾಜ್ಯ ಅಭಿವೃದ್ಧಿ ಆಗಲಿದೆ, ಭ್ರಷ್ಟಾಚಾರವೂ ನಿಯಂತ್ರಣಕ್ಕೆ ಬರಲಿದೆ, ಆದರೆ ವಿಧಾನಸಭೆ ಚುನಾವಣೆ ನಂತರ, ಎನ್.ಡಿ.ಎ ಮೈತ್ರಿಕೂಟದ ನಾಯಕರು ಸಿಎಂ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Edited By : Manjunath H D
PublicNext

PublicNext

23/01/2026 03:22 pm

Cinque Terre

10.55 K

Cinque Terre

2

ಸಂಬಂಧಿತ ಸುದ್ದಿ