ಕೋಲಾರ : ಜಿಲ್ಲೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ರಕ್ತದಾನ ಶಿಬಿರ ಮಾಡಿ ರಕ್ತ ಶೇಖರಿಸಿ ಇಡಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಕ್ತ ಬ್ಯಾಂಕ್, ಏಡ್ಸ್ ನಿಯಂತ್ರಣ, ಲಿಂಗತ್ವ ಅಲ್ಪಸಂಖ್ಯಾತರ ಆರೋಗ್ಯ, ಡ್ರಗ್ಸ್ ನಿಯಂತ್ರಣ ಮುಂತಾದ ವಿಷಯಗಳ ಕುರಿತು ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಅಧಿಕಾರಿಗಳು ಮಾಹಿತಿ ನೀಡಿ, 'ಜಿಲ್ಲೆಯಲ್ಲಿ ಐದು ರಕ್ತ ಬ್ಯಾಂಕ್‍ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 8,811 ಯೂನಿಟ್ ರಕ್ತ ಶೇಖರಣೆಯಾಗಿದೆ. ಆದಾಗಿಯೂ ಕೆಲವೊಮ್ಮೆ ರಕ್ತದ ಕೊರತೆ ಉಂಟಾಗುತ್ತದೆ' ಎಂದರು.
PublicNext
03/02/2026 02:27 pm
LOADING...