ಕೋಲಾರ: ರಸ್ತೆ ಮಧ್ಯೆ ಬೈಕ್ ವೀಲ್ಹಿಂಗ್ ಮಾಡ್ತಾ, ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ, ಬೈಕ್ ಸ್ಟಂಟ್ ರೀಲ್ಸ್ ಪೋಸ್ಟ್ ಮಾಡಿದ್ದ, ಕಾಲೇಜು ವಿದ್ಯಾರ್ಥಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಈ ಘಟನೆ ನಡೆದಿದ್ದು, ಬೆಮೆಲ್ ನಗರದ ರಾಕಿ ಎಂಬಾತ, ಬೈಕ್ ವೀಲ್ಹಿಂಗ್ ಮಾಡಿದ್ದು, ಇದನ್ನ ಸ್ನೇಹಿತರು ವಿಡಿಯೋ ಶೂಟ್ ಮಾಡಿದ್ದಾರೆ, ಇನ್ನು ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೆಜಿಎಫ್ ಪೊಲೀಸರು, ಬೈಕ್ ಸ್ಟಂಟ್ ಮಾಡ್ತಿದ್ದ ಚಾಲಕನ ಬೈಕ್ ಸೀಜ್ ಮಾಡಿದ್ದು, ನಿಷೇಧದ ನಡುವೆಯೂ ವೀಲ್ಹಿಂಗ್ ಮಾಡಿದ್ದಕ್ಕೆ, ಕೆಜಿಎಫ್ ನಗರದ ಉರಿಗಾಮ್ ಠಾಣೆಯ ಪೊಲೀಸರು ದಂಡ ವಿಧಿಸಿದ್ದಾರೆ.
PublicNext
29/01/2026 03:18 pm
LOADING...