ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕಾಂಗ್ರೆಸ್ ನಾಯಕನ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಡಿ

ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ, ಭಾರೀ ಗೋಲ್ಮಾಲ್ ನಡೆದಿದೆ ಎಂದು, ಕಾಂಗ್ರೆಸ್ ನಾಯಕರ ವಿರುದ್ದವೇ, ಕಾಂಗ್ರೆಸ್ ಕಿಸಾನ್ ವಿಭಾಗದ ಜಿಲ್ಲಾಧ್ಯಕ್ಷ ಮುರಳಿಗೌಡ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು, ಕೋಲಾರಕ್ಕೆ ಸಾವಿರಾರು ಕೋಟಿ ಅನುದಾನ ತಂದಿರುವೆ ಎಂದು ಹೇಳುತ್ತಾರೆ, ಆದರೆ ಸೀತಿ ಹೊಸೂರು ಗ್ರಾಮಕ್ಕೆ ಇದುವರೆಗೂ ನಯಾ ಪೈಸೆ ಅನುದಾನವೂ ಬಂದಿಲ್ಲ, ಒಂದೂವರೆ ವರ್ಷದ ಹಿಂದೆ ಉದ್ಘಾಟಿಸಿದ್ದ ರಸ್ತೆ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ, ಇದೀಗ ಕೆರೆ ಅಭಿವೃದ್ಧಿ ವಿಷಯವಾಗಿ ಎಸ್ಟಿಮೇಟ್ ಪ್ರತಿ ಕೇಳಿದರು, ಗುತ್ತಿಗೆದಾರರು ಜಗಳಕ್ಕೆ ಬರುತ್ತಿದ್ದಾರೆ, ಅವಧಿ ಮುಗಿದ ಎಸ್ಟಿಮೇಟ್ ಪ್ರತಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ, 20 ಲಕ್ಷದಲ್ಲಿ ಮಾಡಬಹುದಾದ ಕೆರೆ ಅಭಿವೃದ್ಧಿ ಕೆಲಸಕ್ಕೆ, 3 ಕೋಟಿ 20 ಲಕ್ಷ ಯೋಜನಾ ವೆಚ್ಚ ರೂಪಿಸಿದ್ದಾರೆ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವದಾಗಿ ಶಾಸಕ ಕೊತ್ತೂರು ಮಂಜುನಾಥ್ ಹೇಳುತ್ತಾರೆ, ಆದರೆ ಯೋಜನಾ ವೆಚ್ಚದಲ್ಲಿ ಯಾರಿಗೆ 3 ಕೋಟಿ ಹಣ ಹೋಗಿದೆ ಎಂದು, ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ, ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಮುರಳಿಗೌಡ ಪ್ರಶ್ನಿಸಿದ್ದಾರೆ.

Edited By :
PublicNext

PublicNext

29/01/2026 04:53 pm

Cinque Terre

6.01 K

Cinque Terre

0

ಸಂಬಂಧಿತ ಸುದ್ದಿ