ಕೋಲಾರ : ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವ್ಯವಹಾರದಲ್ಲಿ ಶಾಮೀಲಾಗಿರುವುದರಿಂದ ನಗರ ಬಾರ್ ಲೈನ್ ನಲ್ಲಿರುವ ಜಾಮೀಯಾ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ ಷಾ ಅಲಿ ಅವರಿಂದ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಮುಸ್ಲಿಂ ಅಲ್ಪಸಂಖ್ಯಾತರ ಮುಖಂಡರು ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮುಸ್ಲಿಂ ಮುಖಂಡರುಗಳು ಜಾಮೀಯಾ ಮಸೀದಿಯು ವಕ್ಫ್ ಬೋರ್ಡ್ ಗೆ ಸೇರಿದ್ದರೂ, ಮಸೀದಿಗೆ ಸೇರಿರುವ 50 ಅಂಗಡಿಗಳ ಬಾಡಿಗೆ ಪಡೆದು ನಕಲಿ ರಸೀದಿಗಳನ್ನು ನೀಡಿರುವುದಲ್ಲದೆ ಬಾಡಿಗೆದಾರರಿಗೆ ಬೇರೆ ಬಾಬತ್ತಿನ ರಸೀದಿಗಳನ್ನು ನೀಡುವ ಮೂಲಕ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದು,ಇದಕ್ಕೆ ಜಿಲ್ಲಾ ವಕ್ಫ್ ಬೋರ್ಡ್ ಸಿ.ಇ.ಓ ಶಮ್ಸ್ ಬೆಂಬಲ ಇದೆ ಎಂದು ಆರೋಪಿಸಿದರು.
Kshetra Samachara
31/01/2026 01:27 pm
LOADING...