ಕೋಲಾರ - ಜಿಲ್ಲೆಯ ಸಮೃದ್ಧ ಪರಂಪರೆ ಸಾರುವ ಶಾಸನ, ವೀರಗಲ್ಲು, ಸ್ಮಾರಕಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದ್ದು, ಇತಿಹಾಸದ ಮ್ಯೂಸಿಯಂ ನಿರ್ಮಾಣಕ್ಕೆ ಜಾಗ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಸ್ಮಾರಕ, ವೀರಗಲ್ಲು, ಶಾಸನಗಳ ರಕ್ಷಣೆ ಕುರಿತು ನಡೆದ ಪುರಾತತ್ವ ಇಲಾಖೆ, ಮುಜರಾಯಿ, ಪ್ರವಾಸೋದ್ಯಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಗೆ ತನ್ನದೆ ಆದ ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ಇತಿಹಾಸವಿದೆ. ರಾಜ ಮನೆತನದವರು ಆಳ್ವಿಕೆ ನಡೆಸಿದ್ದಾರೆ ಎಂಬುದಕ್ಕೆ ಸಾಕಷ್ಟು ಕುರುಹುಗಳು ಈಗಲೂ ಇವೆ. ಅವೆಲ್ಲ ನಶಿಸಿ ಹೋಗುವ ಮೊದಲೇ ಪತ್ತೆ ಹಚ್ಚಿ ರಕ್ಷಣೆ ಮಾಡಬೇಕಾಗಿದೆ ಎಂದರು.
Kshetra Samachara
23/01/2026 02:32 pm
LOADING...