ಕೋಲಾರ - ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ ಏನು ಅಗತ್ಯವಿದೆ? ನಗರವೆಂದರೆ ಹೇಗಿರಬೇಕು? ಎಂಬ ಆಶಯ, ದೂರದೃಷ್ಟಿ ಹೊಂದಿದ್ದ ಟಿ.ಚನ್ನಯ್ಯ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಒಡನಾಟ ಹೊಂದಿದ್ದರು. ಭಾರತ ಸಂವಿಧಾನ ಪರಿಷತ್ತಿನ ಸದಸ್ಯರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಂಸದ ಎಂ. ಮಲ್ಲೇಶ್ ಬಾಬು ಹೇಳಿದರು.
ನಗರದ ರಂಗಮಂದಿರದಲ್ಲಿ ಮಾಜಿ ಸಚಿವ, ಕೋಲಾರ-ಚಿಕ್ಕಬಳ್ಳಾಪುರ ನಿರ್ಮಾತೃ ಟಿ.ಚನ್ನಯ್ಯ ಅವರ 41ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಟಿ.ಚನ್ನಯ್ಯ ಕೋಲಾರ ನಗರಕ್ಕೆ ಬೇಕಾದ ಸೌಲಭ್ಯಗಳ ಕುರಿತು ಕನಸು ಕಂಡಿದ್ದು ಮಾತ್ರವಲ್ಲದೇ; ಸ್ಯಾನಿಟೋರಿಯಂ ಆಸ್ಪತ್ರೆ ನಿರ್ಮಾಣ, ಹಾಸ್ಟೆಲ್, ಹಳೆ ಬಸ್ ನಿಲ್ದಾಣ, ಕೋಲಾರಕ್ಕೆ ವಿದ್ಯುತ್ ತಂದರು. ಅವರೊಬ್ಬ ದೂರದೃಷ್ಟಿಯ ನಾಯಕ ಎಂದು ಬಣ್ಣಿಸಿದರು.
Kshetra Samachara
19/01/2026 04:44 pm
LOADING...