ಚಿಕ್ಕಮಗಳೂರು : ಗ್ರಾಮೀಣ ವ್ಯಾಪ್ತಿಯಲ್ಲಿ ಹೊಸದಾಗಿ 11 ಕೆ.ವಿ. ಇಂಡಸ್ಟ್ರಿಯಲ್ ಫೀಡರ್ ಮಾರ್ಗ ನಿರ್ಮಾಣದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹಿರೇಮಗಳೂರು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಇಂಡಸ್ಟ್ರಿಯಲ್ ಫೀಡರ್, ಕೆ.ಆರ್ ಪೇಟೆ ಹಾಗೂ ವಸ್ತಾರೆ ಫೀಡರ್‌ಗಳಲ್ಲಿ ಜನವರಿ 31 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಬಳೆ ಇಂಡಸ್ಟ್ರಿಯಲ್ ಏರಿಯಾ, ಸಿರ್ಗಾಪುರ, ಮಳಲೂರು, ಗಂಜಲಗೋಡು, ಬಾಣಾವರ, ವಸ್ತಾರೆ, ಬಾಚಿಗನಹಳ್ಳಿ, ಕೂದುವಳ್ಳಿ, ಕೋಡುವಳ್ಳಿ, ಹಲಸುಮನೆ, ಹಚಡಮನೆ, ಕಲ್ಲುಗುಡ್ಡೆ, ಅಂಬಳೆ, ಗೌಡನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಹಾಗೂ ಗ್ರಾಹಕರು ಈ ಕಾಮಗಾರಿಗೆ ಸಹಕರಿಸಬೇಕು ಎಂದು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
Kshetra Samachara
29/01/2026 07:46 pm
LOADING...