ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಶಂಕರ ಸ್ವಾಮೀಜಿ ಹಾಕಿಕೊಟ್ಟ‌ ಮಾರ್ಗದಲ್ಲಿ ನಡೆಯಿರಿ: ಪಂಚಮಶಿವಲಿಂಗೇಶ್ವರ ಸ್ವಾಮೀಜಿ‌

ರಾಯಬಾಗ: ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿಗಳು ಒಬ್ಬ ಸನ್ಯಾಸಿಯಾಗಿ ಜ್ಞಾನವನ್ನು ಎಲ್ಲರಿಗೂ ಹಂಚಿ ಹೋಗಿದ್ದಾರೆ. ನಾವುಗಳು ಆ ಜ್ಞಾನವನ್ನು ಬಳಸಿಕೊಂಡರೇ, ಮನೆ, ಓಣಿಗಳು ಶುದ್ಧವಾಗುತ್ತವೆ ಎಂದು‌ ನಿಡಸೋಶಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ‌ ಹೇಳಿದರು.

ರಾಯಬಾಗ ತಾಲೂಕಿನ ಬಾವನಸೌಂದತ್ತಿಗ್ರಾಮದ ಓಂಕಾರ ಆಶ್ರಮ ಮಠದ ದಿ.ಶಿವಶಂಕರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ನುಡಿನಮನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಸರ್ವಧರ್ಮದ ಸಮಾಜದ ಸ್ವಾಮೀಜಿಗಳಾಗಿ ಓಂಕಾರ ಆಶ್ರಮ ಶ್ರೀಗಳಾಗಿ ಹೊರ ಹೊಮ್ಮಿದ್ದಾರೆ. ಅವರ ಹಾಕಿಕೊಟ್ಟ‌ ಮಾರ್ಗ, ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ನಂದಿಕುರಳಿಯ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಶಿವಶಂಕರ ಸ್ವಾಮೀಜಿಗಳು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದು ನಮ್ಮಲ್ಲರಿಗೆ ದಾರಿದೀಪಾಗಿದೆ. ಸೌಂದತ್ತಿ ಗ್ರಾಮ‌ ಅಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮದ‌ ಭಕ್ತಾಧಿಗಳು ಆಗಮಿಸಿ ಶ್ರೀಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸವಾಗಿದೆ ಎಂದರು.

ದಿ.ಶ್ರೀ ಶಿವಶಂಕರ ಸ್ವಾಮೀಜಿ ಅವರ ಪಾದುಕೆಗಳ ಪೂಜೆ ಅಭಿಷೇಕ ನಡೆಯಿತು. ಸಮಾಧಿ ಸ್ಥಳಕ್ಕೆ ರುದ್ರಾಭಿಷೇಕ ನಡೆಯಿತು. ಭಜನೆ, ಮಹಾಪ್ರಸಾದ ಜರುಗಿತು. ಮಹಾದೇವ ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಸದ್ಬಕ್ತರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಶ್ರೀ ಬಸವಲಿಂಗ ಮಹಾಸ್ವಾಮಿಜಿ, ಶ್ರೀ ಜ್ಞಾನಾನಂದ ಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಶ್ರೀ ಮರುಘರಾಜೇಂದ್ರ ಮಹಾಸ್ವಾಮಿ, ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಶೃದ್ಧಾನಂದ ಮಹಾಸ್ವಾಮೀಜಿ, ಶ್ರೀ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ, ಶ್ರೀ ಯತೀಶ್ವರಾನಂದ ಮಹಾಸ್ವಾಮಿಜಿ, ಶ್ರೀ ಕೃಪಾನಂದ ಮಹಾಸ್ವಾಮೀಜಿ, ಶ್ರೀ ಮಹೇಶ್ವರಾನಂದ ಮಹಾಸ್ವಾಮಿಜಿ, ಬಸವರಾಜ ಮಹಾಸ್ವಾಮಿಜಿ, ಶ್ರೀ ಪ್ರಾಣಲಿಂಗ ಮಹಾಸ್ವಾಮೀಜಿ, ಶ್ರೀ ಕುಮಾರ ಸ್ವಾಮೀಜಿ, ಮಾತೋಶ್ರೀಗಳಾದ ನಾಗಲಾಂಬಿಕಾ ದೇವಿ, ಚಿದಾನಂದ ಮಹಾಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ಐ ಆರ್ ಮಠಪತಿ, ನಂದಿಕುರಳಿಯ ಶ್ರೀಶೈಲ ಶ್ರೀಗಳು, ಮಾರುತಿ ಶತಣರು, ಐ ಡಿ ಪಾಟೀಲ ಇದ್ದರು. ಓಂಕಾರಾಶ್ರಮ ಮಠದ ಉತ್ತರಾಧಿಕಾರಿ ಮಾತೋಶ್ರೀ ಬ್ರಮರಾಂಭಿಕಾದೇವಿ ವಂದಿಸಿದರು. ಅನೀಲ ಬೆಳಗಲಿ ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

30/01/2026 10:37 am

Cinque Terre

1.8 K

Cinque Terre

0