ಬೆಳಗಾವಿ: ಸೈಬರ್ ಖದೀಮರು ಹೊಸ ಮಾದರಿ ಕ್ರೈಂ ಆರಂಭಿಸಿದ್ದಾರೆ. ಡಾರ್ಕ್ ವೆಬ್ ನಲ್ಲಿ ಗ್ರಾಹಕರ ಮಾಹಿತಿ ಪಡೆದು, ಕಾಲ್ ಫಾರ್ವರ್ಡ್ ಮಾಡಿ ಬ್ಯಾಂಕ್ ಖಾತೆ ಕನ್ನ ಹಾಕಲಾಗಿದೆ.
ಕುಂದಾನಗರಿ ಬೆಳಗಾವಿಯಲ್ಲಿ ಅಮಾಯಕರ ಖಾತೆಗೆ ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಒಟಿಪಿ ಬದಲಾಗಿ ವೈಸ್ ಓವರ್ ಕಾಲ್ ವೆರಿಫಿಕೇಶನ್ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗಿದೆ. ನಿಲೇಶ್ ದೇಮಜಿ ಎಂಬಾತರ ಬ್ಯಾಂಕ್ ನಿಂದ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಡಾರ್ಕ್ ವೆಬ್ ನಲ್ಲಿ ಸೈಬರ್ ವಂಚಕರಿಗೆ ಗ್ರಾಹಕರ ಡೇಟಾ ಮಾರಾಟ ಮಾಡಲಾಗುತ್ತಿದೆ. ಆ ಡೇಟಾ ಇಟ್ಟುಕೊಂಡು ಸೈಬರದ ಖದೀಮರು ಗ್ರಾಹಕರಿಗೆ ಮೋಸ ಮಾಡ್ತಿದ್ದಾರೆ. ಒಟಿಪಿ ಕೇಳಿದ್ರೆ ಸಾರ್ವಜನಿಕರಿಗೆ ತಕ್ಷಣವೇ ಇವರು ಸೈಬರ್ ವಂಚಕರು ಎಂದು ಗೊತ್ತಾಗುತ್ತದೆ. ಹಾಗಾಗಿ ಅದರ ಬದಲಾಗಿ ಗ್ರಾಹಕರ ಬಳಸ್ತಿರೋ ಯಾವುದಾದರೂ ಆ್ಯಪ್ ಹೆಸರು ಹೇಳಿ ಕರೆ ಮಾಡಿ ಒಂದು ಕೋಡ್ ನಂಬರ್ ಡೈಲ್ ಮಾಡಲು ಹೇಳಿ ನಂಬರ್ ಕಾಲ್ ಫಾರ್ವರ್ಡ್ ಮಾಡಿಕೊಂಡು ಜಾಲ ಬೀಸಲಾಗುತ್ತಿದೆ.
ಸಾರ್ವಜನಿಕರು ಅಪರಿಚಿತ ಕರೆಗಳ ಜೊತೆಗೆ ಥರ್ಡ್ ಪಾರ್ಟಿ ಆ್ಯಪ್ ಬಳಸುವಾಗಲೂ ಎಚ್ಚರ ವಹಿಸಬೇಕಿದೆ. ಸದ್ಯ ಕೇಸ್ ದಾಖಲಿಸಿಕೊಂಡು ಬೆಳಗಾವಿ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
03/02/2026 01:06 pm
LOADING...