ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 16 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ - ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಕಟುಕ

ಬೆಳಗಾವಿ: ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ 10 ವರ್ಷಗಳ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು 16 ಬಾರಿ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಆರೋಪಿ ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ನಡು ರಸ್ತೆಯಲ್ಲೇ ಈ ಬರ್ಬರ ಕೊಲೆ ನಡೆದಿದೆ. ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಬಸಪ್ಪ ಪರಪ್ಪ ಹೊಸಮನಿ ಕೊಲೆಯಾದ ದುರ್ದೈವಿ. ಈರಯ್ಯ ಮಠಪತಿ ಕೊಲೆ ಮಾಡಿದ ಆರೋಪಿ.

ಹಳೇ ವೈಷಮ್ಯ ಹಾಗೂ ತಾಯಿಯೊಂದಿಗೆ ಅನೈತಿಕ ಸಂಬಂಧ ಹಿನ್ನೆಲೆ ಸೋಮವಾರ ರಾತ್ರಿ ಬಸಪ್ಪನಿಗೆ 16 ಬಾರಿ ಚಾಕುವಿನಿಂದ ಚುಚ್ಚಿ ಈರಯ್ಯ ಕೊಲೆ ಮಾಡಿದ್ದಾನೆ.‌ ಕಳೆದ ಹದಿನೈದು ವರ್ಷಗಳಿಂದ ಕೊಲೆಯಾದ ಬಸಪ್ಪ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ 15 ದಿನಗಳ ಹಿಂದೆ ಸ್ವಗ್ರಾಮದಲ್ಲಿ ನೂತನ ಮನೆ ನಿರ್ಮಾಣ ಮಾಡಬೇಕೆಂದು ಬಂದಿದ್ದವನು ಭೀಕರ ಕೊಲೆಯಾಗಿ ಹೋಗಿದ್ದಾನೆ.

ಕೊಲೆಯಾದ ಬಸಪ್ಪ 15 ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ. ಆದರೆ ಆರೋಪಿ ಈರಯ್ಯ ಸೋಮವಾರ ರಾತ್ರಿ ಬಸಿಡೋಣಿಯಿಂದ ಚಿಕ್ಕುಂಬಿ ಕಡೆ ಹೋಗುವಾಗ ಹೂಲಿಕಟ್ಟಿ ಗ್ರಾಮದ ಬಳಿ ನಡು ರಸ್ತೆಯಲ್ಲಿ ಭೀಕರ ಹತ್ಯೆ ಮಾಡಿದ್ದಾನೆ.‌ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಕರೆ ಮಾಡಿ ಕೊಲೆಯಾದ ಸ್ಥಳಕ್ಕೆ ಕರೆಸಿಕೊಂಡು ಹೋಗಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಸಪ್ಪನ ಶವ ಬೆಳಗಾವಿಯ ಬಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ.

Edited By : Shivu K
PublicNext

PublicNext

03/02/2026 06:31 pm

Cinque Terre

8.77 K

Cinque Terre

0

ಸಂಬಂಧಿತ ಸುದ್ದಿ