ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ದೂರು ನೀಡಿದ ವ್ಯಕ್ತಿಯ ಮೇಲೆ ಗ್ರಾಪಂ ಅಧ್ಯಕ್ಷ ಹಲ್ಲೆ ಪ್ರಕರಣ, ಆರೋಪಿಗೆ ಪೊಲೀಸರ ರಕ್ಷಣೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂದೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೂರು ನೀಡಿದ ವ್ಯಕ್ತಿಯ ಬೆನ್ನು ಕಚ್ಚಿ ಹಲ್ಲೆಗೈದಿದ್ದ. ಆದರೆ ಅಧ್ಯಕ್ಷನ ಮೇಲೆ ದೂರು ದಾಖಲಾದರೂ ಅರೆಸ್ಟ್ ಮಾಡದೇ ಹಲ್ಲೆಗೊಳಗಾದ ಸಂತ್ರಸ್ತನನ್ನೇ ಸವದತ್ತಿ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ.

ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಆಪ್ತ ಎಂಬ ಕಾರಣಕ್ಕೆ ಆರೋಪಿ ಶಿಂಧೋಗಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೊಜಿಯ ರಕ್ಷಣೆಗೆ ಸವದತ್ತಿ ಪೊಲೀಸರು ಮುಂದಾಗಿದ್ದಾರೆ.‌ ಸವದತ್ತಿ ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನಮಗೆ ನ್ಯಾಯಕೊಡಿ ಎಂದು ಎಸ್ಪಿ ಕಚೇರಿಗೆ ಸಂತ್ರಸ್ತ ಕುಟುಂಬಸ್ಥರು ದೂರು ನೀಡಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಗ್ರಾಮ ಸಮಸ್ಯೆ ಹೇಳಿದ್ದಕ್ಕೆ ಹನುಮಂತ ಕರಿಕಟ್ಟಿ ಎಂಬಾತನ ಬೆನ್ನು ಕಚ್ಚಿ ಗ್ರಾಪಂ ಅಧ್ಯಕ್ಷ ಹಲ್ಲೆಗೈದಿದ್ದ. ಹಲ್ಲೆಗೈದ ಅಧ್ಯಕ್ಷನನ್ನು ಬಿಟ್ಟು ಹಲ್ಲೆಗೊಳಗಾದ ವ್ಯಕ್ತಿಯನ್ನೇ ಪೊಲೀಸರು ಬಂಧನ ಮಾಡಿದ್ದಾರೆ. ಪೊಲೀಸರ ನಡೆಗೆ ಹನುಮಂತ ಕರಿಕಟ್ಟಿ ಕುಟುಂಬಸ್ಥರ ಆಕ್ರೋಶ ಹೊರ ಹಾಕಿದ್ದಾರೆ.

ಹಲ್ಲೆಗೊಳಗಾದ ಹನುಮಂತ ದೂರು ಕೊಟ್ಟಿದ್ದ. ಆದರೆ ಹನುಮಂತ ನೀಡಿರುವ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕಿರುವ ಆರೋಪ ಮಾಡಲಾಗಿದೆ. ಆದರೆ ಆರೋಪಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೊಜಿ ಕೊಟ್ಟಿರುವ ಪ್ರತಿ ದೂರು ಸ್ವೀಕರಿಸಲಾಗಿದೆ. ಯಾವುದೇ ಅರೆಸ್ಟ್ ವಾರೆಂಟ್ ಇಲ್ಲದೇ ಇದ್ರೂ ನನ್ನ ಗಂಡನನ್ನು ಬಂಧನ ಮಾಡಿದ್ದಾರೆ ಎಂದು ಹನುಮಂತನ ಪತ್ನಿ ಆಕ್ರೋಶ ಹೊರ ಹಾಕಿದ್ದಾಳೆ.

ಹಲ್ಲೆಗೈದ ಗ್ರಾಪಂ ಅಧ್ಯಕ್ಷನ ಬಂಧಿಸುವಂತೆ ಎಸ್ಪಿ ಕಚೇರಿಗೆ ಕುಟುಂಬಸ್ಥರು ದೂರು ನೀಡಿ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

03/02/2026 05:09 pm

Cinque Terre

4.46 K

Cinque Terre

0

ಸಂಬಂಧಿತ ಸುದ್ದಿ