ಬೆಳಗಾವಿ: ಅಥಣಿ ತಾಲೂಕಿನ ಕಾಡಸಿದ್ದೇಶ್ವರ ಆಶ್ರಮ ಹತ್ತಿರ ತಂಗಡಿ ಸಿನ್ನಾಳ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ 7 ಜನರನ್ನು ಬಂಧಿಸಿ 10,500 ರೂಪಾಯಿ, 5 ಮೊಬೈಲ್‌ಗಳು ಹಾಗೂ 5 ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ ಮಹಾನಿಂಗ ರಾಮಪ್ಪ ಮಾಳಿ ಶಶಿಕಾಂತ ಹರೀಬಾ ಕಾಂಬಳೆ, ಆಸಿಫ್ ಅಸ್ಪಾಕಹುಸೇನ ದೇಸಾಯಿ, ರವಿ ಶೇಖರ ಕುಂಬಾರ, ನಿಸಾರ್ ಮಹಮ್ಮದ್ ಡಾಂಗೆ, ಲಿಯಾಜ್ ಹಸನಸಾಬ ಫಕಾಲಿ ಹಾಗೂ ಪ್ರವೀಣ್ ರಾಚಪ್ಪ ಗೌಡಪ್ಪನವರ್ ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ 10.500 ರೂಪಾಯಿ ಹಣವನ್ನು ಪಣಕ್ಕೆ ಇಟ್ಟು ಅಂದರ್-ಬಾಹರ್ ಎಂಬುವ ಜೂಜಾಟ ಆಡುತ್ತಿದ್ದರು.
ಈ ಬಗ್ಗೆ ಅಥಣಿ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 85/2026 ಕಲಂ 87 ಕೆ.ಪಿ. ಆ್ಯಕ್ಟ್ 112 ಬಿಎನ್ಎಎಸ್ ಆಕ್ಟ್-2023 ಅಡಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Kshetra Samachara
03/02/2026 07:52 pm
LOADING...