ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ಚಿರತೆ ದಾಳಿಗೆ 36 ಕುರಿಮರಿಗಳು ಸಾವು

ಬಳ್ಳಾರಿ : ಚಿರತೆ ದಾಳಿಗೆ 36 ಕುರಿಮರಿಗಳು ಬಲಿ ಆಗಿವೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗಲಾಪುರ ತಾಂಡದ ಬಳಿ ನಡೆದಿದೆ. ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿಯ ಗರಗ ಮಲ್ಲಪ್ಪ ಅನ್ನೋರಿಗೆ ಸೇರಿದ ಕುರಿಮರಿಗಳು ಅಂತ ಗುರುತಿಸಲಾಗಿದೆ.ಹೊಲದಲ್ಲಿ ಕುರಿ ಮೇಯಿಸುವ ವೇಳೆ ಹಿಂಡಿನ ಮೇಲೆ ದಾಳಿ ಮಾಡಿದೆ.

ಚಿರತೆ ದಾಳಿಗೆ 36 ಕುರಿಮರಿಗಳು ಮೃತಪಟ್ಟಿವೆ. 3 ಲಕ್ಷರೂ ಮೌಲ್ಯದ 36 ಕುರಿಮರಿಗಳನ್ನು ಒಂದೇ ರಾತ್ರಿಯಲ್ಲಿ ಚಿರತೆಗೆ ಬಲಿಯಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸಮೀಪದ ಬ್ಯಾಲಕುಂದಿಗ್ರಾಮದಲ್ಲಿ ಜಾತ್ರೆ ಇರುವುದರಿಂದ ಕುರಿಗಾಹಿಗಳು ಜಾತ್ರೆಗೆ ತೆರಳಿದ್ದರು. ಕುರಿ ಮೇಯಿಸುವ ವೇಳೆಯಲ್ಲಿ ಮಹಿಳೆಯರೇ ಇದ್ದು, ಅವರು ಜೀವಭಯದಿಂದ ಚಿರತೆಯಿಂದ ಕುರಿಮರಿಗಳನ್ನು ರಕ್ಷಿಸಿಕೊಳ್ಳಲು ಆಗಿಲ್ಲ ಅನ್ನೋ ಮಾಹಿತಿ ಇದೆ.

Edited By : Nirmala Aralikatti
Kshetra Samachara

Kshetra Samachara

30/01/2026 01:13 pm

Cinque Terre

3.86 K

Cinque Terre

0