ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿಯಲ್ಲಿ ಜನಾರ್ದನ್ ರೆಡ್ಡಿ ಮಾಲೀಕತ್ವದ ಮಾಡೆಲ್ ಹೌಸ್‌ಗೆ ಬೆಂಕಿ

ಬಳ್ಳಾರಿ: ಕಂಟೋನ್​ಮೆಂಟ್​ ಬಳಿ ಇರುವ ಶಾಸಕ ಜನಾರ್ದನ್​ ರೆಡ್ಡಿ ಮಾಲೀಕತ್ವದ ಲೇಔಟ್​ನಲ್ಲಿನ ಮಾಡೆಲ್​​ ಹೌಸ್​ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಅದು ಧಗಧಗ ಹೊತ್ತಿ ಉರಿದಿದೆ. ದುಷ್ಕರ್ಮಿಗಳ ಕೃತ್ಯದಿಂದ ಜನಾರ್ದನ್​ ರೆಡ್ಡಿ ಒಡೆತನದ ಮಾಡೆಲ್​ ಹೌಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ, ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಸಂಬಂಧ ಬಳ್ಳಾರಿ ಎಸ್​ಪಿ ಜೊತೆ ಶಾಸಕ ಜನಾರ್ದನ್ ರೆಡ್ಡಿ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದ ಜನಾರ್ದನ್ ರೆಡ್ಡಿ, ಅಧಿವೇಶನ ಮುಗಿದ ನಂತರ ತಕ್ಷಣವೇ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Edited By : Shivu K
PublicNext

PublicNext

23/01/2026 09:58 pm

Cinque Terre

20.51 K

Cinque Terre

0