ಶಿವಮೊಗ್ಗ : ಭದ್ರಾವತಿಯ ಗೌಡ್ರಹಳ್ಳಿಯ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಆತನನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಭದ್ರಾವತಿಯಿಂದ ಕಿಲ್ವಾಜ್ ಎಂಬ 28 ವರ್ಷದ ಯುವಕ ಗೌಡ್ರಹಳ್ಳಿ ಕಡೆ ಬೈಕ್ ನಲ್ಲಿ ಹೋಗುವಾಗ ಸೀಗೆಬಾಗಿ ಹಾಗೂ ಗೌಡ್ರಹಳ್ಳಿಯ ನಡುವೆ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಕಿಲ್ವಾಜ್ ಬಲಕಾಲು ಮೂಳೆ ಮುರಿದಿದೆ. ಪಾದ ಹಿಮ್ಮುಖ ತಿರುಗಿದೆ. ಗಾಯಾಳುನ್ನು ಮಂಗಳೂರಿಗೆ ಸಾಗಿಸಲಾಗಿದೆ. ಕಾರು ಹೊಳೆಹೊನ್ನೂರಿನಿಂದ ಭದ್ರಾವತಿ ಕಡೆ ಸಾಗುತ್ತಿತ್ತು ಎನ್ನಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
31/01/2026 04:46 pm
LOADING...