ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರದಲ್ಲಿ ಭೀಕರ ಅಪಘಾತ: ಇಬ್ಬರು ಯುವಕರು ಬಲಿ

ಸಾಗರ: ತಾಲೂಕಿನ ಉಳ್ಳೂರು ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಮೃತಪಟ್ಟಿದ್ದಾರೆ. ಕೊರಿಯರ್ ಕಂಪನಿಯ ಕ್ಯಾಂಟರ್ ಮತ್ತು ಮಾರುತಿ ಆಲ್ಟೊ ಕಾರು ನಡುವೆ ಉಂಟಾದ ಈ ದುರ್ಘಟನೆಯಲ್ಲಿ ಇಬ್ಬರು ಯುವ ಜೀವಗಳು ಬಲಿಯಾಗಿವೆ.

ಮೃತಪಟ್ಟವರ ವಿವರ

ಮೃತಪಟ್ಟವರನ್ನು ಸಾಗರ ತಾಲೂಕಿನ ತಡಗಲೆ ಗ್ರಾಮದ ನಿವಾಸಿ ವೀರೇಶಕುಮಾರ್ ಟಿ.ಎಸ್. (25) ಮತ್ತು ಸೊರಬ ತಾಲೂಕಿನ ಮಳಲಗದ್ದೆ ನಿವಾಸಿ ಪವಿತ್ರಾ (24) ಎಂದು ಗುರುತಿಸಲಾಗಿದೆ. KA 02 MB 8808 ನೋಂದಣಿ ಸಂಖ್ಯೆಯ ಆಲ್ಟೊ ಕಾರು ಮತ್ತು KA 21 A 9152 ನೋಂದಣಿ ಸಂಖ್ಯೆಯ ಕ್ಯಾಂಟರ್ ನಡುವೆ ಈ ದುರಂತ ಸಂಭವಿಸಿದೆ. ಮೃತರು ಸಾಗರದ ವಿನೋಬಾ ನಗರದಲ್ಲಿರುವ ಅಕ್ಷಯ ಕೋ-ಆಪರೇಟಿವ್ ಸೊಸೈಟಿಯ ಉದ್ಯೋಗಿಗಳಾಗಿದ್ದರು ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಆಲ್ಟೊ ಕಾರು ಸಂಪೂರ್ಣ ನುಚ್ಚು ನೂರಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಪೊಲೀಸರ ಭೇಟಿ, ಪರಿಶೀಲನೆ

ಈ ಘಟನೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆನಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಸಾಗರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ.

ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ"

Edited By : Manjunath H D
PublicNext

PublicNext

02/02/2026 08:12 am

Cinque Terre

13.11 K

Cinque Terre

0

ಸಂಬಂಧಿತ ಸುದ್ದಿ